ಜಿಲ್ಲಾ ಗೃಹ ರಕ್ಷಕ ದಳ ಬೈಂದೂರು ಘಟಕದಿಂದ ವನಮಹೋತ್ಸವ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ಬೈಂದೂರು ಘಟಕದ ವತಿಯಿಂದ ತಾಲ್ಲೂಕು ದಂಡಾಧಿಕಾರಿ ಕಛೇರಿಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

Call us

Click Here

ಕಾರ್ಯಕ್ರಮದಲ್ಲಿ ವನಮಹೋತ್ಸವ ಸಂಕೇತವಾಗಿ ಬೈಂದೂರು ತಹಶಿಲ್ದಾರರಾದ ಶೋಭಾಲಕ್ಷ್ಮಿ ಎಚ್. ಎಸ್ ಅವರು, ಹಸಿರು ಉಡುಗೆಯಲ್ಲಿ ಆಗಮಿಸಿ ಸಸ್ಯಗಳನ್ನು ನೆಟ್ಟು ಬೆಳೆಸಿ ಪೋಷಿಸುವುದರಿಂದ ವಾತವರಣಕ್ಕೆ ಆಗುವ ಪ್ರಯೋಜನಗಳನ್ನು ವಿವರಿಸಿದರು.

ಈ ಸಂದರ್ಭ ಉಪ ತಹಶಿಲ್ದಾರರಾದ ಭೀಮಪ್ಪ, ಬೈಂದೂರು ಪೊಲೀಸ್‍ ಅಪರಾಧ ನಿಗ್ರಹದಳದ ನೂತನ ಉಪನೀರಿಕ್ಷಕ ಅನಿಲ್ ಬಿ ಎಮ್, ಬೈಂದೂರು ಗೃಹ ರಕ್ಷಕ ದಳದ ಘಟಕಾಧಿಕಾರಿಯಾದ ರಾಘವೇಂದ್ರ ಎನ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ತಾಲ್ಲೂಕು ಕಛೇರಿಯ ಸಿಬ್ಬಂದಿ ವರ್ಗದವರಿಗ ಹಾಗೂ ಬೈಂದೂರು ಗೃಹ ರಕ್ಷಕ ದಳದ ಎಲ್ಲಾ ಗೃಹ ರಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ತಹಶಿಲ್ದಾರರಿಂದ ಗಿಡಗಳನ್ನು ವಿತರಿಸಲಾಯಿತು.

Leave a Reply