ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದ ಒಳಿತು ಕೆಡುಕುಗಳ ವಿಮರ್ಶೆ ಮಾಡಿ ಒಳಿತನ್ನು ಸ್ವೀಕರಿಸುವ ಪ್ರಬುದ್ಧ ಮನಸ್ಸುಗಳ ನಿರ್ಮಾಣ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಜ್ಞಾನ ಭೀಕ್ಷಾ ಪಾದಯಾತ್ರೆಯ ವಿವೇಕಾನಂದ ಹೆಚ್. ಕೆ. ಹೇಳಿದರು.
ಅವರು, ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲಾ ಘಟಕ ಇದರ ಸಹಯೋಗದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದರು.
ಶಾಲಾ ವಾಚನಾಲಯ ಸಂದರ್ಶಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ, ರತ್ತುಬಾಯ್ ಜನತಾ ಪ್ರೌಢ ಶಾಲೆ ಮುಖ್ಯ ಉಪಾಧ್ಯಯರಾದ ಮಂಜು ಕಾಳವಾರ, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರವೀಂದ್ರ ಪಿ, ನಿವೃತ್ತ ಶಿಕ್ಷಕರಾದ ತಿಮ್ಮಪ್ಪಯ್ಯ ಜಿ. ಕಲಾವಿದರಾದ ಗಿರೀಶ್ ಬೈಂದೂರು, ಮಾರುತಿ, ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾದ್ಯರಾದ ಜನಾರ್ದನ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿ ಕ್ಷಕಿ ಮುಕ್ತಾ ಪಿ. ಸ್ವಾಗತಿಸಿದರು. ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲಾ ಘಟಕದ ಸಂಚಾಲಕರಾದ ಗಣಪತಿ ಹೋಬಳಿದಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.