ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಸಿಂಚನ ಟ್ರಸ್ಟ್ ರಿ., ಬೆಂಗಳೂರು ಇದರ ಹನ್ನೆರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯಕ್ಷಗಾನ ಸಾಹಿತ್ಯಾಸಕ್ತರಿಗಾಗಿ ವಿಶಿಷ್ಟವಾದ ಸ್ಪರ್ಧೆ ಎರ್ಪಡಿಸಲಾಗಿದೆ.
ಛಂದೋಬದ್ಧ ಪ್ರಸಂಗಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಈ ಸ್ಪರ್ಧೆಯ ಮೊದಲ ಬಹುಮಾನವು 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಎರಡನೇ ಬಹುಮಾನವು 5 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಪ್ರಸಂಗ ರಚನಾ ಸ್ಪರ್ಧೆಯ ನಿಯಮಗಳು: ಪ್ರಸಂಗವು ಪೌರಾಣಿಕ ಪ್ರಸಂಗವಾಗಿರಬೇಕು. ಕಥೆಯ ಎಳೆಯು ಯಾವುದಾದರೂ ಪುರಾಣಗಳಲ್ಲಿ ದಾಖಲಾಗಿರಬೇಕು. ಸ್ಥಳ ಪುರಾಣ ಹಾಗೂ ಕ್ಷೇತ್ರ ಮಹಾತ್ಮೆಯ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಕಥೆಯ ಬಗ್ಗೆ ಹಾಗೂ ಬಳಸಿದ ಮೂಲದ ಬಗ್ಗೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ತಿಳಿಸಬೇಕು ಹಾಗೂ ಕಡ್ಡಾಯವಾಗಿ ಕೊನೆಗೆ ಅದೇ ಕಥೆಯ ಪ್ರಸಂಗವನ್ನು ಸ್ಪರ್ಧೆಗೆ ಕಳುಹಿಸಿಕೊಡಬೇಕು.
ಈಗಾಗಲೇ ಪ್ರಕಟನೆ/ಪ್ರದರ್ಶನಗೊಂಡ ಕೃತಿಗಳನ್ನು ಬಳಸುವಂತಿಲ್ಲ.
ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ.
ಪ್ರಸಂಗ ರಚನೆಗೆ 4 ತಿಂಗಳುಗಳ ಕಾಲಾವಕಾಶ ನೀಡಲಾಗುತ್ತದೆ. ಸ್ಪರ್ಧೆಯು ಆಗಸ್ಟ್ 1, 2021 ರಿಂದ ಆರಂಭವಾಗಿ ನವೆಂಬರ್ 30, 2021 ಕ್ಕೆ ಮುಕ್ತಾಯಗೊಳ್ಳುತ್ತದೆ. ಅಂಚೆ/Email ಮೂಲಕ ಪ್ರಸಂಗವನ್ನು ತಲುಪಿಸಬೇಕು. ತಡವಾಗಿ ಕಳಿಸಲ್ಪಡುವ ಪ್ರಸಂಗಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಪ್ರಸಂಗದ ಪದ್ಯಗಳನ್ನು ಪ್ರಸಂಗಕರ್ತರೇ ಸ್ವತಃ ರಚಿಸಿರಬೇಕು. ಬೇರೆ ಪ್ರಸಂಗಗಳಿಂದ ಪದ್ಯಗಳನ್ನು ಬಳಸಿದರೆ ಅಂತಹ ಪ್ರಸಂಗಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಪ್ರಸಂಗದಲ್ಲಿ ಪದ್ಯಗಳು 75ಕ್ಕಿಂತ ಕಡಿಮೆ ಇರಬಾರದು ಹಾಗೂ 3 ತಾಸಿನ ರಂಗಪ್ರಯೋಗಕ್ಕೆ ಸೂಕ್ತವಾಗುವಂತೆ ಇರಬೇಕು.
ಪ್ರಸಂಗದ ಪದ್ಯಗಳಲ್ಲಿ ಕವಿಯ ಹೆಸರನ್ನು/ಪರಿಚಯವನ್ನು ಗುರುತಿಸುವಂತೆ ಇರಬಾರದು (ಬೇಕಾದರೆ ಸ್ಪರ್ಧೆಯ ಅಂತಿಮ ತೀರ್ಪಿನ ನಂತರ ಅದನ್ನು ಸೇರಿಸಿಕೊಳ್ಳಬಹುದು).
ಸ್ಪರ್ಧೆಯ ತೀರ್ಪು ಪ್ರಸಂಗಕ್ಕೆ ಬಳಸಿದ ಸಾಹಿತ್ಯ, ಛಂದೋಬದ್ಧತೆ, ಬಳಕೆಯಾದ ಮಟ್ಟುಗಳು, ಪ್ರಯೋಗ ಸಾಧ್ಯತೆಗಳು, ಭಾಷಾಶುದ್ಧಿ ಮೊದಲಾದ ಅಂಶಗಳ ಮೇಲೆ ನಿರ್ಣಯವಾಗುತ್ತವೆ. ಇಲ್ಲಿ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.
ಸ್ಪರ್ಧೆಗೆ ಕನಿಷ್ಠ ಪಕ್ಷ 3 ಜನ ಅಭ್ಯರ್ಥಿಗಳು ಇರಬೇಕು. ಅದಕ್ಕಿಂತ ಕಡಿಮೆಯಿದ್ದರೆ ಸ್ಪರ್ಧೆಯನ್ನು ಹಿಂಪಡೆಯಲಾಗುತ್ತದೆ.
ಉತ್ತಮ ಗುಣಮಟ್ಟದ ಪ್ರಸಂಗವನ್ನು ಯಕ್ಷಗಾನ ಪ್ರಸಂಗಕೋಶದಲ್ಲಿ ಪ್ರಕಟಿಸಲಾಗುತ್ತದೆ.
ನಿಮ್ಮ ಪ್ರಸಂಗವನ್ನು ಕೆಳಗೆ ತಿಳಿಸಿದ ಯಾವುದಾದಾರೊಂದು ವಿಧಾನದಲ್ಲಿ ನಮಗೆ ತಲುಪಿಸಬಹುದು :
ಪ್ರಸಂಗವನ್ನು Baraha unicode fontನಲ್ಲಿ type ಮಾಡಿ, Microsoft word fileನ್ನು ಕಳುಹಿಸಬಹುದು.
ಸ್ಪಷ್ಟವಾದ/ಅಂದವಾಗಿ ಬರೆದ ಕೈಬರಹವನ್ನು scan ಮಾಡಿ, PDF ಕಳುಹಿಸಬಹುದು.
ಸ್ಪಷ್ಟವಾದ/ಅಂದವಾಗಿ ಬರೆದ ಕೈಬರಹವನ್ನು ಅಂಚೆ ಮೂಲಕ ಕಳುಹಿಸಬಹುದು.
ಪ್ರಸಂಗ ರಚನೆ ಮಾಡುವವರು ಸೆಪ್ಟಂಬರ್ 1ರ ಒಳಗೆ ಆಯೋಜಕರಲ್ಲಿ ನೋಂದಣಿ ಮಾಡಿಕೊಂಡಿರಬೇಕು.ಸ್ಪರ್ಧಿಗಳು ನೋಂದಣಿಗಾಗಿ ಹೆಸರು, ವಿಳಾಸ, ಯಕ್ಷಗಾನ/ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ತಮ್ಮ ಅನುಭವ, ಮೊಬೈಲ್ ಸಂಖ್ಯೆ, ಆಯ್ದುಕೊಂಡ ಕಥೆ, ಅದರ ಪುರಾಣದ ಮೂಲ ಇತ್ಯಾದಿ ವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆ/email Email: sinchana.yaksha@gmail.com ಕಳುಹಿಸಬಹುದು
ಹೆಚ್ಚಿನ ಮಾಹಿತಿಗಾಗಿ: ರವಿ ಮಡೋಡಿ: 9986384205, ಶಶಿರಾಜ ಸೋಮಯಾಜಿ: 9986363495, ಯಕ್ಷಸಿಂಚನ ಟ್ರಸ್ಟ್ ರಿ. 177 ವಾಸ್ತು ಗ್ರೀನ್ಸ್ ಕೊಡಿಪಲ್ಯ ಮುಖ್ಯ ರಸ್ತೆ ಬೆಂಗಳೂರು 560060 ಸಂಪರ್ಕಿಸಬಹುದು