ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ವಲಯದ ಎಲ್ಲಾ ಸದಸ್ಯರಿಗೆ ಆಹಾರ ಕಿಟ್ ವಿರತಣಾ ಕಾರ್ಯಕ್ರಮ ಇಲ್ಲಿನ ಮಾಹಾಕಾಳಿ ದೇವಸ್ಥಾನದಲ್ಲಿ ನಡೆಯಿತು.
ಕಿಟ್ ವಿತರಿಸಿ ಮಾತನಾಡಿದ ಬೈಂದೂರು ತಹಶೀಲ್ದಾರರಾದ ಶೋಭಾಲಕ್ಷ್ಮಿ ಎಚ್.ಎಸ್ ಈ ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅಂತರ ಕಾಪಾಡಿಕೊಂಡು ಯಾವುದೇ ಸಭೆ ಸಮಾರಂಭದಲ್ಲಿ ಹೆಚ್ಚಿನ ಜನ ಸೇರದೆ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.
ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ವಲಯದ ಅಧ್ಯಕ್ಷರಾದ ರಾಜು ಟೈಲರ್ ಕೊಲ್ಲೂರು, ಕಾರ್ಯದರ್ಶಿ ಲಕ್ಷ್ಮಿ ಬೈಂದೂರು. ಬೈಂದೂರು ನಗರ ಸಮಿತಿಯ ಅಧ್ಯಕ್ಷರಾದ ಮಹಾಬಲ ಮೊಗವೀರ ಹಾಗೂ ಏಳು ವಲಯಗಳ ಅಧ್ಯಕ್ಷರು ಕಾರ್ಯದರ್ಶಿ ಉಪಸ್ಥಿತರಿದ್ದರು.
ನಾಗೇಂದ್ರ ಚಿತ್ತೂರು ಕಾರ್ಯಕ್ರಮವನ್ನು ನಿರೂಪಿಸಿ, ಆಶಾ ದಿನೇಶ ಸ್ವಾಗತಿಸಿದರು. ನೇತ್ರಾವತಿ ಗೋಳಿಹೊಳೆ ವಂದಿಸಿದರು.