ಬೈಂದೂರು ಕೊಲ್ಲೂರು ಅಥವಾ ಕುಂದಾಪುರ ಕೊಲ್ಲೂರು ಮಾರ್ಗ ಮಧ್ಯೆ ಸಿಗುವ ಆನೆಝರಿ ನೇಸರಧಾಮವು ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಸೂರ್ಯನ ಕಿರಣಗಳನ್ನು ಕಾಣಲಾಗದಷ್ಟು ದಟ್ಟ ಕಾನನ. ಹೆಮ್ಮರಗಳು, ಅವಕ್ಕೆ ಸುತ್ತಿಕೊಂಡ ಬಳ್ಳಿಗಳು, ಔಷಧಿ ಗಿಡಗಳು ಸೇರಿದಂತೆ ನೂರಾರು ಬಗೆಯ ಸಸ್ಯ ಪ್ರಬೇಧಗಳು, ಪ್ರಾಣಿ, ಪಕ್ಷಿ, ಸೂಕ್ಷಜೀವಿಗಳ ಆವಾಸಸ್ಥಾನ ಆನೆಝರಿ.
ಸೌಪರ್ಣಿಕಾ ನದಿಯಲ್ಲಿ ಜಲಕ್ರೀಡೆ ಆಡುತ್ತಾ, ಕಾಡಿನ ಮಧ್ಯದಿ ಸಾಗಿ ಹಕ್ಕಿಗಳ ಕಲರವವನ್ನು ಕೇಳುತ್ತಾ, ಅಲ್ಲಲ್ಲಿ ಸಂಚರಿಸುವ ಪ್ರಾಣಿಗಳನ್ನು ನೋಡುತ್ತಾ ಸುತ್ತುವಾಗ ಬೇರೆಯದೇ ಲೋಕದಲ್ಲಿ ಸಂಚರಿಸಿದ ಅನುಭವವಾಗುತ್ತದೆ.
ಅರಣ್ಯ ಇಲಾಖೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಚಿಕ್ಕ ಕುಟೀರ ಟೆಂಟ್ ಹಾಕಿದೆ. ಹಾಗೆ ನದಿಯಲ್ಲಿ ದೋಣಿ ವಿಹಾರ ಮಾಡಬಹುದು. ಕೊಲ್ಲ್ಲೂರು ಶ್ರೀ ಮಾಕಾಂಬಿಕೆ ದೇವಿ ದರ್ಶನ ಮಾಡಿದವರು ಹಾಗೆ ಆನೆಝರಿಗೂ ಭೇಟಿ ನೀಡುತ್ತಾರೆ. ದೂರದಲ್ಲಿ ಅರಶಿಣಗುಂಡಿ ಜಲಪಾತವೂ ಇದೆ.