ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕೆಗಾ೯ಲ್ ಗ್ರಾಮದ ಉದ್ಯೋಗ ಖಾತ್ರಿ ಕೂಲಿಕಾರರ ಸಭೆ ನಡೆಯಿತು
ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ ಉದ್ಘಾಟಿಸಿ ಮಾತನಾಡಿ, ನರೇಗಾ ಕೂಲಿಕಾರರಿಗೆ ಬೇಡಿಕೆ ಆಧಾರದಲ್ಲಿ ಈ ಕೂಡಲೇ ಕೆಲಸ ಕೊಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು .ಇಲ್ಲವಾದರೆ ಆಗಸ್ಟ್ 9ರಂದು ಕೂಲಿಕಾರರ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುತ್ತಿಗೆ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು.
ಮುಖಂಡರಾದ ನಾಗರತ್ನ ನಾಡ, ವೀಣಾ ಭಂಡಾರಿ ,ಜಯಂತಿ, ಸಾಕು, ಶ್ರೀಮತಿ, ಸುಶೀಲ, ನೇತ್ರಾವತಿ, ನಾಗರತ್ನ ಮೊದಲಾದವರು ಇದ್ದರು.