ಕುಂದಾಪ್ರ ಡಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೇಂಜರ್ ಮತ್ತು ರೋವರ್ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಪ್ರತಿಷ್ಠಿತ ಪುರಸ್ಕಾರವಾಗಿದೆ.
ಕಾಲೇಜಿನ ರೇಂಜರ್ ಮತ್ತು ರೋವರ್‌ನ ವಿದ್ಯಾರ್ಥಿಗಳಾದ ಕಾವ್ಯಾ (ತೃತೀಯ ಬಿಎಸ್ಸಿ (ಎಂಸಿಝಡ್), ಪವಿತ್ರಾ (ತೃತೀಯ ಬಿಎಸ್ಸಿ (ಎಂಸಿಝಡ್),ಸತೀಶ್(ತೃತೀಯ ಬಿಎಸ್ಸಿ (ಎಂಸಿಝಡ್), ಸ್ನೇಹಾ (ದ್ವಿತೀಯ ಬಿಎಸ್ ಸಿ, ಎಂಪಿಸಿ) ಮಹಾಲಕ್ಷ್ಮಿ (ದ್ವಿತೀಯ ಬಿಕಾಂ), ಶಮಿತಾ(ದ್ವಿತೀಯ ಬಿಎಸ್ ಸಿ, ಎಂಪಿಸಿ), ಸಿಂಚನ (ದ್ವಿತೀಯ ಬಿಎಸ್ ಸಿ, ಎಂಪಿಸಿ), ಇವರುಗಳು ರಾಜ್ಯ ಪುರಸ್ಕಾರ ಪಡೆದಿದ್ದಾರೆ.
ಇವರಿಗೆ ಕಾಲೇಜಿನ ರೇಂಜರ್ ಲೀಡರ್ ಪ್ರಭಾಶ್ರೀ ಶೆಟ್ಟಿ ಮತ್ತು ರೋವರ್ ವಿಭಾಗದ ರಿತಿನ್ ಅವರು ತರಬೇತಿ ನೀಡಿದ್ದರು. ಅವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ.