ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಲೀಂ ಅಲಿ ಎಂದೇ ಖ್ಯಾತರಾಗಿರುವ ಪಕ್ಷಿ ತಜ್ಞ, ಪ್ಲೋರಾ ಎಂಡ್ ಫೌನಾ ಕ್ಲಬ್‌ನ ಅಧ್ಯಕ್ಷ ಡಾ. ಹೆಚ್. ಎಸ್. ಮಲ್ಲಿ ಅವರ ಪಕ್ಷಿಗಳ ಕುರಿತಾದ ಕೃತಿ ಹಾರ್ಬಿನ್‌ಜೆರ್ಸ್ ಆಫ್ ಡಿಲೈಟ್‌ನ್ನು ಕುಂದಾಪುರದ ರೋಟರಿ ಕ್ಲಬ್ ಆಶ್ರಯದಲ್ಲಿ ಅಧ್ಯಕ್ಷರಾದ ಎ. ಶಶಿಧರ ಹೆಗ್ಡೆ ಡಾ. ಹೆಚ್. ಎಸ್. ಮಲ್ಲಿ ಅವರ ಚಿಕಿತ್ಸಾಲಯದಲ್ಲಿ ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆಗೊಳಿಸಿದ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಎ. ಶಶಿಧರ ಹೆಗ್ಡೆ ಅವರು ಮಾತನಾಡಿ, ಪ್ರಕೃತಿ ಪರಿಸರ, ಪಕ್ಷಿಗಳ ಕುರಿತು ವಿಶೇಷ ಆಸಕ್ತಿಯನ್ನು ಹೊಂದಿ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ತರವಾದ ಕಾರ್ಯದಲ್ಲಿ ತೊಡಗಿರುವ ಡಾ. ಹೆಚ್.ಎಸ್. ಮಲ್ಲಿಯವರು ಪಕ್ಷಿಗಳ ವಿಶೇಷ ಚಿತ್ರ ಸಹಿತವಾಗಿ ಅನುಭವ, ಅಧ್ಯಯನವನ್ನು ಕೃತಿಯಲ್ಲಿ ಧಾರೆಯೆರೆದು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಲೇಖಕ ಡಾ. ಹೆಚ್. ಎಸ್. ಮಲ್ಲಿ ಮಾತನಾಡಿ, ಪಕ್ಷಿ ವೀಕ್ಷಣೆ ನನ್ನ ನಿತ್ಯದ ಹವ್ಯಾಸವಾಗಿದ್ದು, ಅದರ ಅನುಭವ ಹಾಗೂ ಪಕ್ಷಿಗಳ ಮಾಹಿತಿಯನ್ನು ಗ್ರಾಮೀಣ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎನ್ನುವ ದೃಷ್ಠಿಯಿಂದ ಲೇಖನ ಬರೆದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರದ ಪ್ಲೋರಾ ಎಂಡ್ ಫೌನಾ ಕ್ಲಬ್‌ನ ಕಾರ್ಯದರ್ಶಿ ಎನ್. ಮೋಹನ ಆಚಾರ್ಯ, ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ಗಣೇಶ್ ಐತಾಳ್, ಕಾರ್ಯದರ್ಶಿ ಕುಮಾರ ಕಾಂಚನ್, ಪತ್ರಕರ್ತ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.