ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಧಾರ್ಮಿಕ ಕ್ಷೇತ್ರದ, ಪರಿಸರದ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಅರೆಹಾಡಿ ಜಟ್ಟಿಗೇಶ್ವರ ದೇವಾಲಯದ ಪರಿಸರ ಸ್ವಚ್ಛತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪುಂದ ಒಕ್ಕೂಟದ ವತಿಯಿಂದ ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪುಂದ ಒಕ್ಕೂಟದ ಅಧ್ಯಕ್ಷೆ ವೀಣಾ, ಸೇವಾಪ್ರತಿನಿಧಿ ಚೈತ್ರ ಅವರ ನೇತೃತ್ವದಲ್ಲಿ ಸದಸ್ಯರು ದೇವಸ್ಥಾನದ ಪರಿಸರ ಹಾಗೂ ವಠಾರವನ್ನು ಸ್ವಚ್ಛಗೊಳಿಸಿದರು.