ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯಿತು. ಈ ಸಂದರ್ಭ ಊರಿನ ಪರಿಣಿತ ನಾಗಸ್ವರ ವಾದಕ ಉಮೇಶ್ ದೇವಾಡಿಗ ಅವರನ್ನು ಧರ್ಮದರ್ಶಿ ವಿ. ತಿಮ್ಮ ದೇವಾಡಿಗ ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಉದ್ಯಮಿ ನಾಣು ಚಂದನ್ ಮುಂಬೈ, ನರಸಿಂಹ ದೇವಾಡಿಗ ಮರವಂತೆ, ವೆಂಕ್ಟ ದೇವಾಡಿಗ ಮರವಂತೆ, ಇತರರು ಇದ್ದರು.