ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನಾ೯ಟಕ ರಾಜ್ಯ ಸರಕಾರಿ ಹಾಸ್ಟೇಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕನಾ೯ಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವಗ೯ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರಿನಿವಾಸ ಪೂಜಾರಿ ಅವರಿಗೆ ಸಾಮೂಹಿಕವಾಗಿ ಮನವಿ ಸಲ್ಲಿಸಲಾಯಿತು.
ಕಳೆದ ಹತ್ತು ತಿಂಗಳ ಸಂಬಳ ಬಾಕಿ ಪಾವತಿಸಬೇಕು. ಕೆಲಸದ ಭದ್ರತೆ, ಹೊರಗುತ್ತಿಗೆ ಪದ್ಧತಿ ರದ್ಧು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಹೊರಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ಕೋಣಿ, ಜಿಲ್ಲಾಮುಖಂಡರಾದ ಹರೀಶ್ ಬೈಂದೂರು , ಲತಾ.ಯು. ನಾಗರಾಜ ಬೈಂದೂರು, ಕಲ್ಪನಾ ಉಡುಪಿ, ಶಾರದಾ ಪಡುವರಿ, ರೇಣುಕಾ ಯಡ್ತರೆ ಮೊದಲಾದವರು ಇದ್ದರು.