ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಹಿತಿ ಮತ್ತು ಕಲಾವಿದರ ವೇದಿಕೆ ಬೆಂಗಳೂರು, ಸಂಗೀತ ಸಂಭ್ರಮ ಬೆಂಗಳೂರು ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಸಂಭ್ರಮದ ಗ್ರಾಮೀಣ ಮಕ್ಕಳ ಅಮೃತಮಹೋತ್ಸವ ಅಂಗವಾಗಿ ರಾಜ್ಯಾದ್ಯಂತ ನಡೆದ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೇ, ನಡೆಸಿಕೊಟ್ಟ ಅಮೃತಸಿಂಚನ ಕಾರ್ಯಕ್ರಮ ಹಕ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಎನ್.ಎಚ್ ನಾಗೂರ, ಭಾಗವಹಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸುವ ಮೂಲಕ ಚಾಲನೆ ನೀಡಿದರು.
ಸಮೂಹ ಗಾಯನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ 7 ತಾಲೂಕಿನ ವಿವಿಧ ಭಾಗಗಳಿಂದ 83 ಶಾಲೆಗಳ 274 ವಿದ್ಯಾರ್ಥಿ ವಿದ್ಯಾರ್ಥಿನಿಯರ ಅಮೃತಸಿಂಚನ ಸಮೂಹ ಗಾಯನದಲ್ಲಿ ಪಾಲ್ಗೊಂಡಿದ್ದರು. ಜನಪದ ಗೀತೆ, ಭಕ್ತಿ ಗೀತೆ, ನಾಡ ಗೀತೆ, ದೇಶಭಕ್ತಿ ಗೀತೆ, ರಾಷ್ಟ್ರಗೀತೆ, ವಚನ ಹೀಗೆ ಆಯ್ಕೆ ಮಾಡಿದ ಹನ್ನೆರಡು ಹಾಡು ಸಮೂಹ ಗಾಯನ ಮೂಲಕ ಚಿತ್ರೀಕರಿಸಿ ರಾಜ್ಯಮಟ್ಟಕ್ಕೆ ಕಳುಹಿಸಲಾಯಿತು.
ಹಕ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾದ, ಎಸ್ಡಿಎಂಸಿ ಸಮನ್ವಯ ವೇದಿಕೆ ಬೈಂದೂರು ತಾಲೂಕು ಉಪಾಧ್ಯಕ್ಷ ಅಯ್ಯೂಬ್ ಮಾಣಿಕೊಳಲು ಅವರ ಜಿಲ್ಲಾ ಎಸ್ಡಿಎಂಸಿ ಸಮನ್ವಯ ವೇದಿಕೆ ಪರವಾಗಿ ಗೌರವಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಅಯ್ಯೂಬ್ ಹಕ್ಲಾಡಿ ಅಧ್ಯಕ್ಷತೆ ವಹಿಸಿದ್ದರು, ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತವಿಕ ಮಾತನಾಡಿದರು, ಹಕ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನ್, ಪಿಡಿಒ ಚಂದ್ರಶೇಖರ್, ಲಯನ್ಸ್ ಅಧ್ಯಕ್ಷ ಸತೀಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಾರದಾ, ಭಾಸ್ಕರ ಪೂಜಾರಿ, ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಬೈಂದೂರು ತಾಲೂಕು ಅಧ್ಯಕ್ಷರಾದ ಅವನೀಶ ಹೊಳ್ಳ, ತಾಲೂಕು ಘಟಕದ ಕಾರ್ಯದರ್ಶಿ ಜ್ಯೋತಿ ಶೆಟ್ಟಿ, ಹಕ್ಲಾಡಿ ಪಂಚಾಯಿತಿ ಘಟಕ ಅಧ್ಯಕ್ಷ ಚಂದ್ರಹಾಸ,ಸಿಆರ್‌ಪಿ ದಿನಕರ ಎಚ್, ಎಸ್ಡಿಎಂಸಿ ಉಪಾಧ್ಯಕ್ಷೆ ರೇವತಿ, ಅಧ್ಯಾಪಕ ಸಂಜೀವ ಬಿಲ್ಲವ ಉಪಸ್ಥಿತರಿದ್ದರು.
ಕೃಷ್ಣಾನಂದ ಶ್ಯಾನುಭಾಗ್ ದಂಪತಿ, ಪ್ರಮೋದ್ ಕೆ.ಶೆಟ್ಟಿ, ರವಿ ಮರವಂತೆ, ಗೀತಾ ಕೋಟೇಶ್ವರ, ವರದ ಅಂಕದಕಟ್ಟೆ, ಜ್ಯೋತಿ ಹಕ್ಲಾಡಿ, ಗೀತಾ ಕೋಣಿ, ಶಾರದಾ ಉಪ್ಪಿನಕುದ್ರು ರಾಜೇಶ್ ಕೋಣಿ, ಕರುಣಾಕರ ಮರವಂತೆ ಎಸ್ಡಿಎಂಸಿ ಸಮನ್ವಯ ವೇದಿಕೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು, ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಸ್ವಾಗತಿಸಿದರು, ತಾಲೂಕು ಅಧ್ಯಕ್ಷ ಎಸ್. ವಿ. ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.