ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಸಿಟಿ ವತಿಯಿಂದ ಸೆಲ್ಯೂಟು ಸೈಲೆಂಟ್ ಎಂಬ ಕಾರ್ಯಕ್ರಮದಡಿಯಲ್ಲಿ ಸಮಾಜದ ಎಲೆಮರೆ ಕಾಯಿಯಂತೆ ಇದ್ದು ತಮ್ಮದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವವರನ್ನು ಗುರುತಿಸುವ ನಿಟ್ಟಿನಲ್ಲಿ ಬೈಂದೂರು ಭಾಗದ ಯುವ ಯೋಧ ಪ್ರಸ್ತುತ ಜಮ್ಮು-ಕಾಶ್ಮೀರದ ಪುಲ್ವಾಮದ ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ದೇವಾಡಿಗ ಅವರನ್ನು ಇಲ್ಲಿನ ಮಹಾಸತಿ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಬೈಂದೂರು ಸಿಟಿ ವಲಯಾಧಿಕಾರಿ ಮಣಿಕಂಠ ದೇವಾಡಿಗ, ಘಟಕದ ಉಪಾಧ್ಯಕ್ಷೆ ಸೌಮ್ಯ ಬಿಕೆ, ಸಕ್ಕು ಕಲ್ಮಕ್ಕಿ, ಭಾನುಮತಿ ಬಿಕೆ, ಚೈತ್ರ, ದೀಪಿಕಾ ಆಚಾರ್ಯ, ಪ್ರೇಮ ವಿ ಶೆಟ್ಟಿ, ರಾಘವೇಂದ್ರ ಪೂಜಾರಿ, ರಾಘವೇಂದ್ರ ಹೊಳ್ಳ, ರಾಘವೇಂದ್ರ ದೀಕ್ಷಾ ಮೊಬೈಲ್, ಅಶ್ರಫ್, ಸ್ಥಾಪಕ ಕಾರ್ಯದರ್ಶಿ ಸುಶಾಂತ್ ಆಚಾರ್ಯ, ಉಪಸ್ಥಿತರಿದ್ದರು.
ಪ್ರಾಜೆಕ್ಟ್ ಡೈರೆಕ್ಟರ್ ಸತೀಶ್ ದೇವಾಡಿಗ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಸವಿತಾ ಗಾಣಿಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.