ಕುಂಧಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಹಾಗೂ ನವಶಕ್ತಿ ಮಹಿಳಾ ವೇದಿಕೆ ರಿ ಕೊಲ್ಲೂರು ಇವರ ಆಶ್ರಯದಲ್ಲಿ ಕೋವಿಡ್ 19 ಜನ ಜಾಗೃತಿ ಕಾರ್ಯಕ್ರಮ ಕೊಲ್ಲೂ ರಿನಲ್ಲಿ ನಡೆಯಿತು.
ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈಲೇಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಪಾಲಿಸಿ ಯಾವುದೇ ಆತಂಕ ಬೇಡ, ಧೈರ್ಯದಿಂದಿರಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭ ಕೋವಿಡ್ 19 ಜನ ಜಾಗೃತಿ ಕರಪತ್ರವನ್ನು ಸಂಘದ ಸದಸ್ಯರು ಕೊಲ್ಲೂರಿನ ಅಂಗಡಿ ಮುಂಗಟ್ಟುಗಳಿಗೆ ಹಾಗೂ ಗ್ರಾಮದ ಸ್ಥಳೀಯರಿಗೆ ನೀಡಿ ಕೋವಿಡ್ 19 ಜನ ಜಾಗೃತಿ ಮೂಡಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಹಾಗೂ ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಮತ್ತು ಸಂಘದ ಸದಸ್ಯರಾದ ಸುಷ್ಮಾ, ಜಯಲಕ್ಷ್ಮಿ, ರತ್ನ, ಸುಗುಣ, ಗೌರಿ, ಉಷಾ, ಭವಾನಿ, ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಆಶಾ ಉಪಸ್ಥಿತರಿದ್ದರು.