ಆಳ್ವಾಸ್‌ನಲ್ಲಿ ಮಹಿಳಾ ಸುರಕ್ಷತಾ ಅಭಿಯಾನ ಜಾಗೃತಿ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಮಂಗಳೂರು ಪೋಲಿಸ್ ಕಮಿಷನರೇಟ್ ವ್ಯಾಪ್ತಿಯಡಿಯಲ್ಲಿ ಮಹಿಳಾ ಸುರಕ್ಷತಾ ಅಭಿಯಾನದ ಅಂಗವಾಗಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತುರ್ತು ಸ್ಪಂದನಾ ವ್ಯವಸ್ಥೆಯ ಕುರಿತು ಜಾಗೃತಿ ನೀಡಲಾಯಿತು.

Call us

Click Here

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಪಣಂಬೂರು ಎಸಿಪಿ ಮಹೇಶ್ ಪ್ರಸಾದ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ, ಇಂತಹ ಸಂದರ್ಭಗಳಲ್ಲಿ ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಪೋಲಿಸ್ ಇಲಾಖೆಯ ಸದಾ ಸಿದ್ಧವಾಗಿರುತ್ತದೆ. ಮಹಿಳೆಯರಿಗೆ ಯಾವುದೇ ರೀತಿಯ ಅಭದ್ರತೆಯ ಪರಿಸ್ಥಿತಿ ಬಂದೊದಗಿದರೆ ತುರ್ತು ಸಹಾಯವಾಣಿ ೧೧೨ಕ್ಕೆ ಕರೆ ಮಾಡುವ ಮೂಲಕ ಪೋಲಿಸ್ ಸಹಾಯವನ್ನು ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಮೂಡುಬಿದಿರೆ ಪೋಲಿಸ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್, ಎಸ್‌ಐಗಳಾದ ಸುದೀಪ್ ಹಾಗೂ ದಿವಾಕರ್ ರೈ, ಎಎಸ್‌ಐ ಕಾಂತಪ್ಪ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Leave a Reply