ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಇಲ್ಲಿನ ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ದೇಶಭಕ್ತಿ ಗೀತೆಗಳ ವಾಚನಾ ಸ್ಪರ್ಧೆಯಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 6ನೇ ತರಗತಿಯ ಕುಮಾರಿ ರಿಷಿಕಾ ಪ್ರಥಮ ಸ್ಥಾನ ಪಡೆದಿದ್ದಾಳೆ. ಅವರು ಶಿಕ್ಷಕ ದಂಪತಿಗಳಾದ ಬೈಂದೂರಿನ ರೂಪ ಮತ್ತು ರಾಮ ದೇವಾಡಿಗರ ಪುತ್ರಿ.
ಆಗಸ್ಟ್ 3ರಿಂದ 10ರವರೆಗೆ ನಡೆದ ಈ ದೇಶಭಕ್ತಿ ಗೀತೆಗಳ ವಾಚನಾ ಸ್ಪರ್ಧೆಯಲ್ಲಿ ಹೊರರಾಜ್ಯ ಮತ್ತು ಹೊರದೇಶಗಳ ಮಕ್ಕಳು
ಭಾಗವಹಿಸಿದ್ದರು.