ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನೇಷನ್ ಲವರ್ಸ್ ಬೈಂದೂರು ಸಂಸ್ಥೆಯ ಗೌರವಧ್ಯಕ್ಷರಾಗಿ ಗೋವಿಂದ ಬಾಬು ಪೂಜಾರಿ ಹಾಗೂ ಗೌರವ ಸಲಹೆಗಾರರಾಗಿ ಪ್ರಸಾದ್ ಬೈಂದೂರು ಅವರನ್ನು ಆಯ್ಕೆ ಮಾಡಲಾಗಿದೆ.
ಯುವ ಸೈನಿಕ ಪ್ರಶಾಂತ್ ದೇವಾಡಿಗ ನೇತೃತ್ವದ ಆರಂಭಿಸಲಾಗಿರುವ ನೇಷನ್ ಲವರ್ಸ್ ಬೈಂದೂರು ಸಂಘಟನೆಯು ಯುವ ಮನಸ್ಸುಗಳಲ್ಲಿ ದೇಶಪ್ರೇಮದ ಭಾವನೆ ಹೆಚ್ಚಿಸಿ ಭಾರತೀಯ ಸೈನ್ಯ ಸೇರಲು ಅಗತ್ಯವಿರುವ ತರಬೇತಿಗಳನ್ನು ಉಚಿತವಾಗಿ ನೀಡುವ ಉದ್ದೇಶ ಹೊಂದಿದೆ.