ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವುಂದದ ಗರಡಿಬೆಟ್ಟಿನ ನಿವಾಸಿ ಮುತ್ತು ಪೂಜಾರಿ ಅವರ ಪುತ್ರಿ ಯಶೋಧ ಪೂಜಾರಿ ಅವರು ಕಿಡ್ನಿ ಹಾಗೂ ಹೃದಯ ವೈಪಲ್ಯದಿಂದ ಬಳುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಹಣ ಹೊಂದಿಸಲು ದಾನಿಗಳ ನೆರವಿನ ಅಗತ್ಯವಿದೆ.
ಸದ್ಯ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್ನ ಅಗತ್ಯವಿದೆ. ಹೆಚ್ಚಿನ ಚಿಕಿತ್ಸೆಗೆ ಸುಮಾರು ಎರಡು ಲಕ್ಷ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಒಂದು ಮಗುವಿನ ತಾಯಿಯಾಗಿರುವ ಯಶೋಧ ಅವರು ಕಡು ಬಡತನದ ಜೀವನ ಸಾಗಿಸುತ್ತಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ಹಣವನ್ನು ಭರಿಸಲು ಸಾಧ್ಯವಾಗದೇ ಇರುವುದರಿಂದ ದಾನಿಗಳ ನೆರವಿನ ಮೊರೆ ಹೋಗಿದ್ದಾರೆ.
ಯಶೋಧ ಪೂಜಾರಿ ಅವರಿಗೆ ಸಹಾಯ ಮಾಡಲಿಚ್ಚಿಸುವವರು,
ಕೆನರಾ ಬ್ಯಾಂಕ್ ನಾವುಂದ
ಉಳಿತಾಯ ಖಾತೆ ಸಂಖ್ಯೆ: 01732200077345
ಐಎಫ್ಎಸ್ಸಿ ಕೋಡ್: CNRB0010173
ಗೂಗಲ್ ಫೇ: 9535677194