ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಸಾಧಾರಣ ಸಾಧನೆಗೈದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾದ ಬಾಲ ಪ್ರತಿಭೆ ಕುಂದಾಪುರದ ಕೋಡಿಯ ಆರ್ಯನ್ ಎನ್. ಶೇರುಗಾರ್ ಅವರನ್ನು ಬೈಂದೂರಿನ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಬೆಂಗಳೂರಿನ ಶಾಸಕರ ಭವನದಲ್ಲಿ ಸನ್ಮಾನಿಸಿದರು.
ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಸಾಧನೆಗೈದ ಬಾಲಕ ಮುಂದೆಯೂ ದೇಶಕ್ಕೆ ಕೀರ್ತಿ ತರುವಂತಹ ಸಾಧನೆ ಮಾಡಲಿ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹಾರೈಸಿದರು. ಈ ಸಂದರ್ಭ ಬಾಲಕನ ಪೋಷಕರಾದ ಅಂಜಲಿ ಹಾಗೂ ನಾಗೆಂದ್ರ ಕೋಟೆ ಉಪಸ್ಥಿತರಿದ್ದರು.
ಇದನ್ನೂ ಓದಿ:
► ಕುಂದಾಪುರ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮೂರು ವರ್ಷದ ಪೋರ ಆರ್ಯನ್ – https://kundapraa.com/?p=52163 .