ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿ ದಿನವೂ ಒಂದೊಂದು ಹೊಸ ಹಿಂದಿ ಶಬ್ಧವನ್ನು ಕಲಿಯುವುದರ ಮೂಲಕ ರಾಷ್ಟ್ರಭಾಷಾ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ದಿನನಿತ್ಯದ ಸಂವಹನದಲ್ಲಿ ಬಳಸುವ ಮೂಲಕ ಮಾತ್ರ ಭಾಷೆಯೊಂದು ಸದಾ ಜೀವಂತವಾಗಿರುವುದಲ್ಲದೇ, ಸತತ ವೃದ್ಧಿಗೊಳ್ಳುವುದು ಎಂದು ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ಮಾಜಿ ಮುಖ್ಯೋಪಾಧ್ಯಾಯರು, ಹಿಂದಿ ಶಿಕ್ಷಕರಾದ ದಿನಕರ್ ಆರ್. ಶೆಟ್ಟಿ ಹೇಳಿದರು.
ಅವರು ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ಹಿಂದಿ ದಿವಸ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವನಾ ನುಡಿಗಳಲ್ಲಿ ನಮ್ಮೆಲ್ಲರ ಅಭಿಮಾನದ ರಾಷ್ಟ್ರಭಾಷೆ ಹಿಂದಿಯ ಬೆಳವಣಿಗೆಯ ಅಗತ್ಯತೆಯನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಹಿಂದಿ ಭಾಷೆಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಹೇಗೆ ಸಹಕಾರಿಯಾಗುವುದೆಂದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂದಿ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಹಿಂದಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿ ದಿನಕರ್. ಆರ್ . ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿ.ಯು ತರಗತಿಯ ಸಮೃದ್ಧಿ ಕಿಣಿ ವಿವಿಧ ಹಿಂದಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣಾ ಪಟ್ಟಿಯನ್ನು ವಾಚಿಸಿದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಸಮೃದ್ಧಿ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪಿ.ಯು.ಸಿ ಯ ವಿದ್ಯಾರ್ಥಿ ಪವನ್ ಧನ್ಯವಾದ ಗೈದರು.