ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಟ್ಟಡ ಮತ್ತು ಇತರೆ ನಿಮಾ೯ಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆಯ ವತಿಯಿಂದ ಕಾಮಿ೯ಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಕುಂದಾಪುರ, ಬೈಂದೂರು ತಾಲೂಕಿನ ಕಾಮಿ೯ಕರ ಅದಾಲತ್ ಕಾರ್ಯಕ್ರಮ ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾಕಾರ್ಮಿಕ ಅಧಿಕಾರಿ ಬಿ. ಆರ್. ಕುಮಾರ್ , ಕಾಮಿ೯ಕರ ಸಮಸ್ಯೆಗಳ ಕುರಿತಂತೆ ಬಾಕಿ ಇರುವ ಅಜಿ೯ಗಳನ್ನು ಇತ್ಯಥ೯ ಪಡಿಸಲಾಗುವುದು. ಕಾಮಿ೯ಕ ಇಲಾಖೆ ಕಾಮಿ೯ಕರ ಬೆನ್ನೆಲುಬಾಗಿ ಸದಾ ನಿಮ್ಮ ಸೇವೆಗೆ ಬದ್ಧವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭ ಕುಂದಾಪುರ, ಬೈಂದೂರು ತಾಲೂಕಿನ ಕಾಮಿ೯ಕರ ದೂರು, ಅಜಿ೯, ಅಹವಾಲುಗಳನ್ನು ಕಾರ್ಮಿಕ ಅದಾಲತ್ನಲ್ಲಿ ಸ್ವೀಕರಿಸಲಾಯಿತು. ಕಾಮಿ೯ಕ ಮುಖಂಡ ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು. ಕುಂದಾಪುರ ವೃತ್ತ ಕಾಮಿ೯ಕ ನಿರೀಕ್ಷಕರಾದ ಎಂ.ಪ್ರಸನ್ನ ಕುಮಾರ್ ಸ್ವಾಗತಿಸಿದರು.