ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾತೃಭೂಮಿ ಮಹಿಳಾ ಸಹಕಾರ ಸಂಘ ನಿ. ಇದರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಇಲ್ಲಿನ ರೋಟರಿ ಭವನದಲ್ಲಿ ಜರುಗಿತು.
ಸಂಸ್ಥೆಯ ಅಧ್ಯಕ್ಷರಾದ ಅನುಸೂಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ರೆಹನಾ ಸುಲ್ತಾನಾ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ, ಜಮಾ ಖರ್ಚು, ಆಸ್ತಿ ಜವಾಬ್ಧಾರಿ ವರದಿ ಮಂಡಿಸಿದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷರಾದ ಆಶಾ, ನಿರ್ದೇಶಕರಾದ ಲಕ್ಷ್ಮೀ ಬೈಂದೂರು, ಗೀತಾ. ಎಸ್, ಸರಳಾ, ಅಂಬಿಕಾ, ಸಾವಿತ್ರಿ, ನೇತ್ರಾವತಿ, ಮಾಲತಿ, ಗಿರಿಜಾ, ಶ್ಯಾಮಲಾ, ಆಲಿಯಾ ನಾಜ್, ಪ್ರೇಮ, ಸಂಸ್ಥೆಯ ಸಿಬ್ಬಂದಿಗಳಾದ ಶಶಿಕುಮಾರ್, ನಾಗಶ್ರೀ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಾಯಕಿ ಅಕ್ಷತಾ ಗಂಗೊಳ್ಳಿ ಭಕ್ತಿಗೀತೆ, ಚಿತ್ರಗೀತೆ ಹಾಡಿದರು, ಆಶಾ ಕಿಶೋರ್ ಪ್ರಾರ್ಥಿಸಿದರು, ಸಂಸ್ಥೆಯ ಸಿಬ್ಬಂದಿ ಪ್ರಫುಲ್ಲ ಸ್ವಾಗತಿಸಿದರು. ಪತ್ರಕರ್ತ ಅಂದುಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು