ಕತಾರ್: ದೀಪಕ್ ಶೆಟ್ಟಿ ಅವರಿಗೆ ಅಭಿಯಂತರಶ್ರೀ ಪ್ರಶಸ್ತಿ ಪ್ರದಾನ

Click Here

Call us

Call us

Call us

Call us

ಕತಾರ್ ಕರ್ನಾಟಕ ಸಂಘದಿಂದ ಇಂಜಿನೀಯರ್ಸ್ ಡೇ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ದೋಹಾ,ಕತಾರ್
: ಕರ್ನಾಟಕ ಸಂಘ ಕತಾರ್‌ನಲ್ಲಿ ಶ್ರೀ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ 171ನೇ ಜನ್ಮಶತಮಾನೋತ್ಸವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿರುವ ಮುಂಬೈ ಸಭಾಂಗಣದಲ್ಲಿ ನಡೆಯಿತು.

Click Here

Call us

Click Here

ಕರ್ನಾಟಕ ಸಂಘ ಕತಾರಿನ ಅಧ್ಯಕ್ಷರಾದ ನಾಗೇಶ್ ರಾವ್ ಅವರು ವಿಶ್ವೇಶ್ವರಯ್ಯನವರ ಈ ಮಾತುಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಬಾಬೂರಾಜನ್ ಉಪಸ್ಥಿತರಿದ್ದರು.

ಕರ್ನಾಟಕ ಮೂಲದ ಮೂರು ಅಭಿಯಂತರರು, ವಿವಿಧ ತಾಂತ್ರಿಕ ವಿಷಯಗಳ ಕುರಿತು ಭಾಷಣ ನೀಡಿದರು. ಕತಾರ್ ಗೇಸ್ ಸಂಸ್ಥೆಯಲ್ಲಿ ಹಿರಿಯ ರಾಸಾಯನಿಕ ಅಭಿಯಂತರರಾದ ಶಂಕರಸ ಧರ್ಮದಾಸ್ ತಾಂತ್ರಿಕ ವಿಷಯ ‘ಕಂಟ್ರೋಲ್ ವಾಲ್ವ’ ಬಗ್ಗೆ ಪ್ರಸ್ತುತಪಡಿಸಿದರು, ಮೆಹೂಲ್ ಕನ್ಸಲ್ಟಿಂಗ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸೈಯದ್ ಯಾಸೀನ್ ಅವರು ‘ಕತಾರ್ 2022 ಫುಟ್ಬಾಲ್ ಕ್ರೀಡಾಂಗಣಗಳಿಗೆ ಸಾರಿಗೆ ವ್ಯವಸ್ಥೆ’ ಕುರಿತು ಮಾತನಾಡಿದರು, ಸೇವಿಯಸ್ ಕ್ರಾಸ್ತಾ ಅವರು ‘ಸೇತಿವೆ ನಿರ್ಮಾಣದ ಅಚ್ಚುಗಳ’ ಬಗ್ಗೆ ಪ್ರಸ್ತುತಪಡಿಸಿದರು.

ಕರ್ನಾಟಕ ಸಂಘ ಕತಾರ್ ಪ್ರತಿ ವರ್ಷದಂತೆ ಈ ಬಾರಿಯು ಭಾರತ ಮೂಲದ ಮಹನೀಯರಿಗೆ ಅಭಿಯಂತರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣಕುಮಾರ್ ಬಂದಕಾವಿ ಅವರಿಗೆ 2021ನೇ ಸಾಲಿನ ಮೊದಲನೇ ಅಭಿಯಂತರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು ಕತಾರ್ ಗೇಸ್ ಸಂಸ್ಥೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಸಿ, ಬಹಳಷ್ಟು ಸಮಾಜ ಕಲ್ಯಾಣ ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದರು.

ಬೈಂದೂರು ಮೂಲದ ದೀಪಕ್ ಶೆಟ್ಟಿ ಅವರಿಗೆ ಎರಡನೇ ಅಭಿಯಂತರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ಕತಾರ್ ನಲ್ಲಿನ ಜೆರಾಕ್ಸ್ ಸಂಸ್ಥೆಯನ್ನು ಬೆಳೆಸಿ ಉದ್ಧರಿಸಿರುವುದು ಮಾತ್ರವಲ್ಲದೆ, ಅದೆ ಸಂಸ್ಥೆಯಲ್ಲಿ ಪ್ರಮುಖ ಆಡಳಿತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಯೆ ತಮ್ಮೆದೆ ಆದ ನೂತನ ಸಂಸ್ಥೆ ಪ್ರರಂಭಿಸಿ ನೂರಾರು ಜನರಿಗೆ ಕೆಲಸದ ಅವಕಾಶ ಕಲ್ಪಿಸಿರುವರು. ಇವರು ಸಮಾಜದ ಹಿತಾಸಕ್ತಿಯ ಸಲುವಾಗಿ ಅನೇಕಾನೇಕ ಸಹಾಯಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

Click here

Click here

Click here

Call us

Call us

ಮೂರನೇ ಅಭಿಯಂತರಶ್ರೀ ಪ್ರಶಸ್ತಿಯನ್ನು ವೆಂಕಟ್ ರಾವ್ ಅವರಿಗೆ ನೀಡಲಾಯಿತು. ಕಾರಣಾಂತರಗಳಿಂದ ಅವರು ಕತಾರಿನಲ್ಲಿರದ ಕಾರಣ ಅವರ ಅನುಪಸ್ತಿತಿಯಲ್ಲಿ ಪ್ರಶಸ್ತಿ ಪ್ರದಾನ ಘೋಷಿಸಲಾಯಿತು. ಭಾರತದಿಂದ ಹಿಂದಿರುಗಿದ ಮೇಲೆ ಅವರಿಗೆ ಸಾಂಪ್ರದಾಯಿಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೆಂಕಟ್ ರಾವ್ ಕರ್ನಾಟಕ ಸಂಘದ ಕತಾರಿನ ಮಾಜಿ ಅಧ್ಯಕ್ಷರು ಹಾಗು ರೆಡ್ಕೋ ಅಲ್ಮನ ಸಂಸ್ಥೆಯಲಿ ವ್ಯವಸ್ತಾಪಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ಸಂಘದ ಪೂರ್ವಾಧ್ಯಕ್ಷರಾದ ವೀರಭದ್ರಪ್ಪ ಮನ್ನಂಗಿ, ಅರುಣ್ ಕುಮಾರ್, ದೀಪಕ್ ಶೆಟ್ಟಿ, ಕರ್ನಾಟಕ ಮೂಲದ ಇತರ ಸಂಸ್ಥೆಗಳಾದ ಬಂಟ್ಸ್ ಕತಾರ್, ತುಳು ಕೂಟ, ಎಂ.ಸಿ.ಎ, ಕೆ.ಎಂಸಿ.ಎ, ಎಂ.ಸಿ.ಸಿ,ಎಸ್.ಕೆ.ಎಂ.ಡ್ಬ್ಲು.ಎ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶೃತಿ ಕುಮಾರ ಅವರು ವಿಶ್ವೇಶ್ವರಯ್ಯನವರ ಜೀವನ – ವೃತ್ತಿಯ ಬಗ್ಗೆ ಕಿರು ಪರಿಚಯ ನೀಡಿದರು ಹಾಗು ಮೊದಲ ಅಭಿಯಂತರಶ್ರೀ ಪುರಸ್ಕೃತರ ಪರಿಚಯವನ್ನು ಸಭಿಕರಿಗೆ ನೀಡಿದರು. ಸುಚಿತ್ರ ಶ್ರೀಧರ ಅವರು ದೀಪಕ್ ಶೆಟ್ಟಿ ಹಾಗು ವೆಂಕಟ್ ರಾವ್ ಅವರ ಪರಿಚಯ ನೀಡಿದರು. ಸಭೆಯ ಭಾಷಣಕಾರರಿಗೆ ಕರ್ನಾಟಕ ಸಂಘ ಕತಾರಿನ ಪೂರ್ವಾಧ್ಯಕ್ಷರುಗಳಿಂದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

Leave a Reply