ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಂತ್ರಿಕವಾಗಿ ಮುಂದುವರಿದ ದೇಶಗಳು ಇಂದು ಪ್ರತಿಯೊಂದು ಮನೆಯಲ್ಲಿ, ಕ್ಷೇತ್ರದಲ್ಲಿ ಅಂತರ್ಜಾಲವನ್ನು ಉಪಯೋಗಿಸುತ್ತಿದೆ. ಶಿಕ್ಷಣ, ಬ್ಯಾಂಕಿಂಗ್, ವ್ಯವಹಾರ ಕ್ಷೇತ್ರ ಅಥವಾ ನಮ್ಮ ಇಂದಿನ ಆಗುಹೋಗುಗಳ ವಿನಿಮಯ ಹಾಗೂ ಬೇರೆ ಬೇರೆ ವಿಚಾರಗಳಿಗೆ ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿದೆ. ಕೋವಿಡ್‌ನ ಈ ದಿನಗಳಲ್ಲಿ ಇ-ಶಿಕ್ಷಣ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕುಂದಾಪುರ ವಕೀಲ, ತರಬೇತಿದಾರ ಶ್ರೀಧರ್ ಪಿ.ಎಸ್. ಹೇಳಿದರು.
ರೋಟರಿ ಕ್ಲಬ್ ಗಂಗೊಳ್ಳಿ, ಯುವ ಸ್ಪಂದನ ಕೇಂದ್ರ ಉಡುಪಿ, ನಿಮಾನ್ಸ್ ಆಸ್ಪತ್ರೆ ಬೆಂಗಳೂರು, ಸಂಗಮ ಸಂಜೀವಿನಿ ಸ್ವಸಾಯ ಸಂಘ ಒಕ್ಕೂಟ, ನಾವುಂದ ಗ್ರಾಮ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ ರೋಟರಿಯ ಸಾಕ್ಷರತಾ ಮಾಸದ ಕಾರ್ಯಕ್ರಮದ ಭಾಗವಾಗಿ ನಾವುಂದ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟ ಇ-ಶಿಕ್ಷಣ ಸಾಧಕ ಬಾಧಕ ವಿಚಾರ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಂಗೊಳ್ಳಿ ರೋಟರಿ ಅಧ್ಯಕ್ಷ ರಾಜೇಶ್ ಎಂ. ಜಿ. ಕಾರ್ಯಕ್ರಮ ಉದ್ಘಾಟಿಸಿದರು. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಪಂಚಾಯತ್ ಸದಸ್ಯೆ ಮುತ್ತು ಮೊಗವೀರ, ಯುವಸ್ಪಂದನ ಕೇಂದ್ರದ ನರಸಿಂಹ ಗಾಣಿಗ, ತಾಲೂಕು ಸಂಪನ್ಮೂಲ ವ್ಯಕ್ತಿ ಸುನೀತಾ, ಹರ್ಷಿತಾ ಹಾಗೂ ಪ್ರೇಮ್ ಉಪಸ್ಥಿತರಿದ್ದರು. ಕಸ್ತೂರಿ ಸ್ವಾಗತಿಸಿದರು. ಒಕ್ಕೂಟದ ಶಾಂತ ಕಾರ್ಯಕ್ರಮ ನಿರೂಪಿಸಿದರು. ಜಾಂಬವತಿ ವಂದಿಸಿದರು.