ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಮ್ಮಾಡಿ ಜನತಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಾದ ಶಂಕರ ಪಿ. ಹೆಚ್, ಶ್ರೀಧರ ರಾವ್ ಹಾಗೂ ದಾನಿಗಳಾದ ಬಾಲ್ತು ಲೋಬೊ ಅವರು ನೀಡಿದ ಸಮವಸ್ತ್ರ ವಿತರಣೆ ಹಾಗೂ ನೋಟ್ಸ್ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ. ವಿ. ವಿ. ಮಂಡಳಿ ರಿ. ಹೆಮ್ಮಾಡಿ ಇದರ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಮವಸ್ತ್ರ ಮತ್ತು ನೋಟ್ಸ್ ಪುಸ್ತಕ ನೀಡಿದ ದಾನಿಗಳಿಗೆ ಗೌರವಿಸಿದರು.
ಈ ಸಂರ್ಭ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಖ್ಯೋಪಾಧ್ಯಾಯರಾದ ಮಂಜು ಕಾಳಾವರ ಪ್ರಸ್ತಾವಿಸಿ, ಸ್ವಾಗತಿಸಿದರು. ಗಣಿತ ಶಿಕ್ಷಕರಾದ ಶ್ರೀಧರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕರಾದ ದಿನಕರ ಧನ್ಯವಾದ ಸರ್ಮಪಿಸಿದರು.