ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಸುಮುಖ ಕಾಂಪ್ಲೆಕ್ಸ್’ನ ನೆಲಮಹಡಿಗೆ ಸ್ಥಳಾಂತರಗೊಂಡ ರಿಶಾ ಡಯಾಗ್ನೋಸ್ಟಿಕ್ ಸೆಂಟರ್ ಕಛೇರಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೈದ್ಯ ಡಾ. ಪ್ರವೀಣ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಬೈಂದೂರು ರೆಡ್ ಕ್ರಾಸ್ ಅಧ್ಯಕ್ಷರಾದ ನಿತಿನ್ ಶೆಟ್ಟಿ, ಕಾರ್ಯದರ್ಶಿ ಮನೋಹರ್ ಶೆಟ್ಟಿ, ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮ್ ದಾಸ್, ನಾಗರಾಜ್ ಹುಬ್ಬೆರಿ, ರಿಶಾ ಡಯಾಗ್ನೋಸ್ಟಿಕ್’ನ ರಮೇಶ್ ಜೋಗಿ ಹಳಗೇರಿ, ಮೊದಲಾದವರು ಉಪಸ್ಥಿತರಿದ್ದರು.
ಉಚಿತ ಮಧುಮೇಹ ಹಾಗೂ ರಕ್ತದೋತ್ತಡ ತಪಾಸಣಾ ಶಿಬಿರದ ಪ್ರಯೋಜನವನ್ನು 80ಕ್ಕೂ ಅಧಿಕ ಮಂದಿ ಪಡೆದುಕೊಂಡರು. ಡಾ. ಪಲ್ಲವಿ ಶೆಟ್ಟಿ ಶಿಬಿರವನ್ನು ನಡೆಸಿದರು. ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.