ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಕನ್ನಡ ಹಬ್ಬ – 2021’

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಭಾಷೆಯಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಕುಲಸಚಿವರಾದ ಡಾ. ಸಂಪತ್ ಕುಮಾರ್ ಹೇಳಿದರು

Call us

Click Here

ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘದ ವತಿಯಿಂದ ನಡೆದ 2 ದಿನದ ‘ಕನ್ನಡ ಹಬ್ಬ – 2021’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸ್ತ್ರೀಯ ಸ್ಥಾನವಿರುವ ಕನ್ನಡ ಭಾಷೆಯಲ್ಲಿ ಉನ್ನತ ಮಟ್ಟದ ಜ್ಞಾನವಿದೆ. ಆದರೆ ಭಾಷೆಯ ಸರಿಯಾದ ಅಧ್ಯಯನ ಆಗುತ್ತಿಲ್ಲ. ನಾವಿರುವ ನಾಡು ಹಾಗೂ ಭಾಷೆಯ ಕುರಿತು ಹೆಮ್ಮೆಯಿರದೇ ಹೋದರೆ ವ್ಯಕ್ತಿತ್ವ ಬೆಳೆಯಲು ಸಾಧ್ಯವಿಲ್ಲ. ಸಾಹಿತ್ಯವು ತಪ್ಪನ್ನು ತಿದ್ದಿ, ಬಹುಮುಖಿ ಚಿಂತನೆಗಳನ್ನು ಬೆಳೆಸುತ್ತದೆ ಹಾಗೂ ಲಲಿತ ಕಲೆಗಳಿಂದ ಆತ್ಮಶಕ್ತಿ ವೃದ್ಧಿಯಾಗುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ಸಾಹಿತ್ಯ-ಸಂಸ್ಕೃತಿಯನ್ನು ಪ್ರೀತಿಸುವ ಮನೋಭಾವ ಬೆಳೆಯಬೇಕು ಎಂದರು.

ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮಾತನಾಡಿ, ಸಾಹಿತ್ಯದ ಚಿಂತನೆಗಳು ಮೂಡುವ ಮೊದಲು ನಮ್ಮಲ್ಲಿ ಆಂಗಿಕ ಭಾಷೆಯ ಬಳಕೆಯಿತ್ತು, ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಲಹರಿ ಇದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ – ತಾಂತ್ರಿಕ ವಿಷಯಗಳೂ ಕನ್ನಡದಲ್ಲಿ ಸಿಗುವಂತಾಗಬೇಕು ಎಂದರು. ಭಾಷೆ ಅಥವಾ ಸಾಹಿತ್ಯದಿಂದ ಎಲ್ಲವನ್ನೂ ಅಭಿವ್ಯಕ್ತಿಗೊಳಿಸಲು ಸಾಧ್ಯವಿಲ್ಲ, ಆದರೆ ಸರಿಯಾಗಿ ಅರ್ಥಗ್ರಹಣ ಮಾಡಿಕೊಂಡರೆ ಮಾತ್ರ ಭಾಷೆಯ ಜೊತೆ ಸಾಂಗತ್ಯ ಹೆಚ್ಚುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆನಾಂಡಿಸ್ ಮಾತನಾಡಿ, ಕನ್ನಡವು ಸಮೃದ್ಧಿಯಾದ ಭಾಷೆ , ಅದು ನಶಿಸಿ ಹೋಗಲು ಸಾಧ್ಯವಿಲ್ಲ ಆದರೆ ಭಾಷೆ ಸೊಗಡನ್ನು ಅರಿಯದೇ ಹೋದರೆ ಬೆಳೆಯಲು ಸಾಧ್ಯವಿಲ್ಲ. ಹೆಚ್ಚು ಭಾಷೆಗಳನ್ನು ಕಲಿಯುವ ಮೂಲಕ ಜ್ಞಾನಾರ್ಜನೆಯನ್ನು ಸುಲಭವಾಗಿಸಬೇಕು ಎಂದರು. ಜತೆಗೆ ತಾಂತ್ರಿಕ ವಿದ್ಯಾಸಂಸ್ಥೆಗಳಲ್ಲಿ ಕನ್ನಡ ಭಾ?ಯಲ್ಲಿ ಶಿಕ್ಷಣ ಪಡೆಯುವ ಮಹತ್ವವನ್ನು ತಿಳಿಸದರು.

ಎರಡನೇ ದಿನ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಇತಿಹಾಸ ತಜ್ಞ ಹಾಗೂ ಸಂಶೋಧನಕಾರ ಪುಂಡಿಕಾಯ್ ಗಣಪಯ್ಯ ಭಟ್, ತಂತ್ರಜ್ಞಾನದ ಅವಿ?ರದಿಂದ ಪತ್ರ ವ್ಯವಹಾರದ ಹವ್ಯಾಸ ನಶಿಸಿ ಹೋಗಿದೆ. ರಾಜ್ಯದಲ್ಲಿ ಪ್ರದೇಶಗಳಿಗೆ ಅನುಗುಣವಾಗಿ ಭಾಷೆಯ ಬದಲಾವಣೆ ಆಗುವುದರಿಂದ ಏಕ ರೂಪದ ಕನ್ನಡ ಭಾಷೆ ಬಳಕೆ ಕಷ್ಟಸಾಧ್ಯ. ಮಕ್ಕಳಲ್ಲಿ ಭಾಷಾಭಿರುಚಿ ಬೆಳೆಸಬೇಕಾದರೆ ಮಾತೃಭಾಷೆಯ ಶಿಕ್ಷಣ ಮನೆಯಿಂದಲೇ ಆರಂಭವಾಗಬೇಕು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ವ್ಯವಹಾರ, ಬರಹ ಹಾಗೂ ಶಿಕ್ಷಣದಲ್ಲಿ ಕನ್ನಡದ ಬಳಕೆಯಾದರೆ ಮಾತ್ರ ಭಾಷೆಯ ಬೆಳವಣಿಗೆಯಾಗುತ್ತದೆ. ಕನ್ನಡ ಸಂಸ್ಕೃತಿಯನ್ನು ವೈಭವೀಕರಿಸದೇ ಪ್ರಸಕ್ತ ಕಾಲದಲ್ಲಿ ಕರ್ನಾಟಕದಲ್ಲಿ ಕನ್ನಡದ ಪರಿಸ್ಥಿತಿಯ ಆವಲೋಕನವಾಗಬೇಕು ಎಂದು ಹೇಳಿದರು.

Click here

Click here

Click here

Click Here

Call us

Call us

ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಮ್ ಸುಳ್ಯ, ಕನ್ನಡ ಸಂಘದ ಸಂಯೋಜಕ ವಾಸುದೇವ್ ಶಹಾಪುರ್, ವಿದ್ಯಾರ್ಥಿ ಸಂಯೋಜಕ ಮಹಾಂತೇಶ್, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಭರತನಾಟ್ಯ ಪುಷ್ಪಾಜಲಿ ನೃತ್ಯದ ಮೂಲಕ ಕನ್ನಡ ಹಬ್ಬಕ್ಕೆ ಚಾಲನೆ ನೀಡಲಾಯಿತು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಹಾಗೂ ಚಿತ್ರ ಕಲಾವಿದ ಗಣೇಶ್ ಆಚಾರ್ಯ ಅವರು ದಾರದಿಂದ ಮೂಡಿಸಿದ ಕನ್ನಡ ತಾಯಿ ಭುವನೇಶ್ವರಿಯ ಚಿತ್ರ ಪ್ರಮುಖ ಆಕರ್ಷಣೆಯಾಗಿತ್ತು. ಜೀವನ್ ರಾಮ್ ಸುಳ್ಯ ನಿರ್ದೇಶನದ ದೇವವೃತ ನಾಟಕ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯ, ಹಾಡು, ಭಾಷಣ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಪ್ರತಿಭೆಗಳನ್ನು ತೋರ್ಪಡಿಸಲು ಅವಕಾಶ ನೀಡಲಾಯಿತು.

Leave a Reply