ಕಾರಂತರ ಸಾಹಿತ್ಯ, ವ್ಯಕ್ತಿತ್ವವನ್ನು ಪದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ: ಸತೀಶ್ ವಡ್ಡರ್ಸೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕಾರಂತರ ಪ್ರತಿ ಒಂದು ಕಾದಂಬರಿಯಲ್ಲೂ ಅವರಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತಿತ್ತು, ಅದನ್ನು ಅಧ್ಯಯನ ಮಾಡುತ್ತಾ ಅದರಲ್ಲಿ ನಾವು ತೊಡಗಿಕೊಂಡಾಗ ನಾವು ಹೊಸ ಲೋಕಕ್ಕೆ ತಲುಪಿದ ಅನುಭವ ಆಗುವುದರಲ್ಲಿ ಸಂಶಯವಿಲ್ಲ. ಯಾರನ್ನು ಮೆಚ್ಚಲಿಸಕ್ಕಾಗಿ ಬರೆಯದ ಕಾರಂತರು ವಾಸ್ತವದಲ್ಲಿ ಏನು ನೋಡುತ್ತಾರೆ ಅದನ್ನು ನಿರ್ಭಯದಿಂದ, ಜೀವನ ದರ್ಶನಕ್ಕೆ ಏನು ಬೇಕು, ಬದುಕನ್ನು ಕಟ್ಟಿಕೊಳ್ಳಲು ಏನು ಅವಶ್ಯವಾಗಿದೆ ಅಂತದಹುವುಗಳನ್ನು ಕಾರಂತರ ಕಾದಂಬರಿಗಳಲ್ಲಿ ನಾವು ನೋಡಬಹುದು, ಕಾರಂತರ ಸಾಹಿತ್ಯ,ವ್ಯಕ್ತಿತ್ವವನ್ನು ಪದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ ಎಂದು ಸಾಹಿತಿ, ಶಿಕ್ಷಕ ಸತೀಶ್ ವಡ್ಡರ್ಸೆ ಅವರು ಹೇಳಿದರು.

Call us

Click Here

ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹ್ಯಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ಒಂಭತ್ತನೇ ದಿನದ ಕಾರಂತ ಚಿಂತನ ಹಾಗೂ ಈಶಲಾಸ್ಯ ನೃತ್ಯ ತಂಡ ಚಿತ್ರಪಾಡಿ-ಸಾಲಿಗ್ರಾಮ ಇವರಿಂದ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರಂತರು ನಮಗೆ ಎಣೆಯಿಲ್ಲದ ಚಕಿತವಾಗುತ್ತಾ ಹೋಗಿದ್ದಾರೆ, ಮಕ್ಕಳ ಕೌಶಲ್ಯಯುತ ಶಿಕ್ಷಣದ ಕಲ್ಪನೇ ಕನಸು ಕಂಡು ನನಸಾಗಿಸಿದವರು. ಮಕ್ಕಳಿಗೆ ಪರಿಸರದ ಜೊತೆಗಿನ ಶಿಕ್ಷಣ ನಿಜವಾದ ಶಿಕ್ಷಣ ಎಂದು ತೋರಿಸಿದವರು. ಕನ್ನಡ ಸಾಹಿತ್ಯದ ಮೇರು ಶಿಖರವಾಗಿ ಗೋಚರಿಸಿದವರು . ಜೀವನೋತ್ಸಾಕ್ಕೆ ಕಾರಂತರೇ ಸಾಟಿ. ಕಾರಂತರು ಕನ್ನಡ ಸಾಹಿತ್ಯ ಲೋಕದ ಅಪರಂಜಿ ಎನ್ನಲು ಕನ್ನಡಿಗರಾದ ನಮಗೆಲ್ಲ ಹೆಮ್ಮೆ ಎಂದು ಸತೀಶ್ ವಡ್ಡರ್ಸೆ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾರಂತ ಪ್ರತಿಷ್ಠಾನದ ಸದಸ್ಯ ಜಿ ಸಂಜೀವ್ ನೇರವೆರಿಸಿ, ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಬಾರಿಕೆರೆ ವಹಿಸಿದ್ದರು. ಸದಸ್ಯರಾದ ಸಾಹಿರ ಬಾನು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮ ಸ್ವಾಗತಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಶೈಲಾ ಎಸ್ ಪೂಜಾರಿ ಅವರು ವಂದಿಸಿದರು. ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply