ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ತನ್ನ ಮೊದಲ ಪ್ರಯತ್ನದಲ್ಲೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಆಯ್ಕೆಯಾದ ಸುಗಂಧಿ ಮಕ್ಕಳ ಚಲನಚಿತ್ರ ನಿರ್ಮಿಸಿದ ನೆನಪು ಮೂವೀಸ್ ಕೋಟ ಇದೀಗ ಮಕ್ಕಳ ಕಿರುಚಿತ್ರ ರಾಷ್ಟ್ರೀಯ ಶಿಕ್ಷಣ ಕ್ರಮ ಪ್ರೇರಿತ ‘ಕುದ್ರು’ ಚಿತ್ರಕ್ಕೆ ಚಾಲನೆ ದೊರೆಯಿತು.
ಚಾಲನೆ ನೀಡಿ ಮಾತನಾಡಿದ ಯುವವಾಹಿನಿ ರಿ. ಯಡ್ತಾಡಿ ಘಟಕದ ಅಧ್ಯಕ್ಷ ಉದ್ಯಮಿ ರಾಜು ಪೂಜಾರಿ ಅವರು ಸದಾ ಮಕ್ಕಳ ಸಮಸ್ಯೆಗಳ ಕುರಿತು ಚಿಂತಿಸುವ , ಯೋಜನೆಗೆ ಈಡು ಮಾಡುವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುವ ಚಿತ್ರ ನಿರ್ಮಿಸುವ ನೆನಪು ಮೂವೀಸ್ ತಂಡದ ಈ ಪ್ರಯತ್ನವೂ ಯಶಸ್ವಿಯಾಗಲಿ ಎಂದು ನುಡಿದರು.
ಮಾತಿಲ್ಲದೇ ಮಾತಾನಾಡುವ ಈ ಕಿರುಚಿತ್ರದ ಕಥೆ-ಚಿತ್ರಕಥೆ -ನಿರ್ದೇಶನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಅವರದ್ದು. ಸಂಗೀತ ರವಿ ಕಾರಂತ್, ಡಿ.ಓ.ಪಿ. ಎ.ಕೆ ಐತಾಳ್, ಸಹನಿರ್ದೇಶಕರಾಗಿ ಸತೀಶ್ ವಡ್ಡರ್ಸೆ, ಕಲೆ ಗಿರೀಶ್ ಆಚಾರ್ಯ, ಕುಮಾರ, ಗೀತೆ ರಾಘವೇಂದ್ರ ರಾಜ್, ಮಾರ್ಗದರ್ಶಕರಾಗಿ ಪ್ರಕಾಶ್ ಪೂಜಾರಿ, ಶಿವರಾಮ ಕೊಠಾರಿ, ಅಜಿತ್ ದೇವಾಡಿಗ, ಪ್ರಶಾಂತ್ ಮೊದಲಾದವರು ಸಹಕರಿಸಲಿದ್ದಾರೆ. ಮೂವತ್ತು ಬಾಲ ನಟರು ಭೂಮಿಕೆಯಲ್ಲಿದ್ದು ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ.