ಹೊರನಾಡ ಕನ್ನಡಿಗ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Call us

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಗಳ ಅಧ್ಯಕ್ಷ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಅವರಿಗೆ ಪ್ರಸಕ್ತ ಸಾಲಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

Call us

Click Here

Click here

Click Here

Call us

Visit Now

Click here

ದುಬೈ ಹಾಗೂ ಫುಜೈರಾ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಡೆಸುತ್ತಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರು ಇತ್ತಿಚಿಗೆ ಹುಟ್ಟೂರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದರು. ಹೊರನಾಡ ಕನ್ನಡಿಗರು, ಕನ್ನಡಿಗ ಸಂಸ್ಥೆಗಳ ಹಾಗೂ ಊರಿನ ಹತ್ತಾರು ಸಂಘ ಸಂಸ್ಥೆಗಳಿಗೆ ಪ್ರವೀಣ ಕುಮಾರ್ ಶೆಟ್ಟಿ ಅವರು ನೆರವು ನೀಡುತ್ತಲೇ ಬಂದಿದ್ದಾರೆ.

ಕೋವಿಡ್ ಮೊದಲ ಅಲೆಯ ಸಂದರ್ಭ ಕನ್ನಡಿಗರಿಗೆ ಪ್ರವೀಣ್ ಶೆಟ್ಟಿ ಅವರು ಸ್ವಂತ ಖರ್ಚಿನಲ್ಲಿ ಚಾರ್ಟರ್ಡ್ ವಿಮಾನದ ಮೂಲಕ ತಾಯ್ನಾಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರು. ಮಾತ್ರವಲ್ಲ ತನ್ನ ಹೋಟೆಲ್ ಮುಚ್ಚಿದ್ದರೂ ಕೂಡ ಎಲ್ಲಾ ಸಿಬ್ಬಂದಿಗಳಿಗೆ ರಜೆ ಸಹಿತ ವೇತನ ನೀಡಿ ಪ್ರವೀಣ್ ಶೆಟ್ಟಿ ಮಾನವೀಯತೆ ಮೆರೆದಿದ್ದರು. ಎರಡನೇ ಅಲೆಯ ವೇಳೆ ಪುಡ್ ಕಿಟ್’ಗಳನ್ನು ವಿತರಿಸಿದ್ದರು.

ಜುಲೈ 6, 1967 ರಂದು ಜನಿಸಿದ ಪ್ರವೀಣ ಶೆಟ್ಟಿ ಅವರು ಕೋಟೇಶ್ವರ ಸರ್ಕಾರಿ ಜೂನಿಯರ್ ಕಾಲೇಜುನಲ್ಲಿ ಪಿಯುಸಿ ಹಾಗೂ ಭಂಡರ್ಕಾರ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ಶಿಕ್ಷಣದ ಬಳಿಕ ಉದ್ಯಮಕ್ಕಾಗಿ ದುಬೈಗೆ ತೆರಳಿದ ಅವರು 2001 ರಲ್ಲಿ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ ಆರಂಬಿಭಿಸಿದರು.

ಕಳೆದ 15 ವರ್ಷಗಳಲ್ಲಿ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಅವರು ಕನ್ನಡ, ತುಳು ಮತ್ತು ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿರುವ ಪ್ರವೀಣ ಕುಮಾರ್ ಶೆಟ್ಟಿ ಅವರು ವಿಶೇಷವಾಗಿ ಯುಎಇಯಲ್ಲಿ ಕಾರ್ಯಗಳನ್ನು ಮಾಡುವ ಕನ್ನಡಿಗರಿಗೆ ನೆರವಾಗುವ ಜೊತೆಗೆ ಮತ್ತು ಅವರ ಹೋಟೆಲ್ಗಳಲ್ಲಿ ಆತಿಥ್ಯವನ್ನು ನೀಡುತ್ತಲೇ ಬಂದಿದ್ದಾರೆ.

Call us

ಅನಾಥ ಮಕ್ಕಳಿಗೆ ನೆರವು, ಅಂಧ ಶಾಲೆಗೆ ಕೆಲವು ಪುನರ್ವಸತಿಗೆ ನೆರವು, ಶಿಕ್ಷಣ ಸಂಸ್ಥೆಗಳಿಗೆ ನೆರವು, ಧಾರ್ಮಿಕ ಕೇಂದ್ರಗಳಿಗೆ ನೆರವು ನೀಡುತ್ತಲೇ ಬಂದಿದ್ದಾರೆ.

2012ರಲ್ಲಿ ಬ್ರಹ್ಮಾವರದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಸಾಮಾನ್ಯ ಜನರಿಗೆ ಸಹಾಯ ಮಾಡಿದರು. 2012 ರಲ್ಲಿ, ಅವರು ‘ನಿರ್ದೇಶಕ – ಸ್ಪೂರ್ತಿಧಾಮ ಕುಂದಾಪುರ’ ಪೀಠವನ್ನು ಹೆಮ್ಮೆಯಿಂದ ವಹಿಸಿಕೊಂಡರು ಮತ್ತು ಸ್ಪೂರ್ತಿಧಾಮಕ್ಕಾಗಿ ದುಬೈನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದರು, ಅಲ್ಲಿ ಅವರು ರೂ.15,00,000 ಸಂಗ್ರಹವನ್ನು ಸಂಗ್ರಹಿಸಿದರು ಮತ್ತು ಈ ಮೊತ್ತವನ್ನು ಸ್ಪೂರ್ತಿಧಾಮಕ್ಕೆ ನೀಡಿದರು. 2013ರಲ್ಲಿ, ಅವರು ಕರ್ನಾಟಕದ ಕುಂದಾಪುರದ ಗಂಗೊಳ್ಳಿಯಲ್ಲಿ ‘ಸರ್ವೋಧರ್ಮ–ಸಾಮೂಹಿಕ ವಿವಾಹ ಸಮ್ಮೇಳನಕ್ಕೆ ಪೂರ್ಣ ಸಹಾರ. 2014ರಲ್ಲಿ, ವಕ್ವಾಡಿಯಲ್ಲಿ ಅಂಚೆ ಕಚೇರಿ ಮತ್ತು ಬಸ್ ನಿಲ್ದಾಣದ ಕಟ್ಟಡವನ್ನು ನಿರ್ಮಾಣ ಸೇರಿದಂತೆ ಹತ್ತಾರು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಪ್ರವೀಣ ಕುಮಾರ್ ಶೆಟ್ಟಿ ಅವರಿಗೆ ಸಂದ ಪ್ರಶಸ್ತಿ ಗೌರವಗಳು:
2009ರಲ್ಲಿ ಅಬುಧಾಬಿ ಕರ್ನಾಟಕ ಸಂಘ ಆಯೋಜಿಸಿದ್ದ ‘ಕುವೆಂಪು ವಿಶ್ವ ಕನ್ನಡ ಸಮ್ಮೇಳನ’ದಲ್ಲಿ ‘ವಿಶ್ವ ಮಾನವ ಪ್ರಶಸ್ತಿ’ನೀಡಿ ಗೌರವಿಸಲಾಯಿತು. 2012ರಲ್ಲಿ ಭಾರತದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಿನುಗು ಸಮಾರಂಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆ ಮತ್ತು ಸೇವೆಯನ್ನು ಗುರುತಿಸಿ ಅವರಿಗೆ ಪ್ರತಿಷ್ಠಿತ ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2011 ರಲ್ಲಿ, ಅವರನ್ನು ಮುಂಬೈನಲ್ಲಿ ‘ವರ್ಲ್ಡ್ ಬಂಟ್ಸ್’ ಮತ್ತು 2012 ರಲ್ಲಿ ‘ಬಹ್ರೇನ್ ಬಂಟ್ಸ್’ ಗೌರವ

ಇದನ್ನೂ ಓದಿ:
► ಯಕ್ಷರಂಗದ ಸಿಡಿಲಮರಿ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ – https://kundapraa.com/?p=54345 .

Leave a Reply

Your email address will not be published. Required fields are marked *

16 − 3 =