ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ದೀಪಾವಳಿಯ ಪ್ರಯುಕ್ತ ನಡೆಯಲಿರುವ ಅಭ್ಯಂಗ ಸಪ್ತಾಹಕ್ಕೆ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್ ಭಟ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹ ವೈದ್ಯಾಧಿಕಾರಿಗಳಾದ ಡಾ. ವಿಕ್ರಮ್ ಕುಮಾರ್, ಪಿಜಿ ಡೀನ್ ಡಾ. ರವಿಪ್ರಸಾದ್ ಹೆಗ್ಡೆ, ಪಿಎಚ್ಡಿ ಡೀನ್ ಡಾ. ಕೃ?ಮೂರ್ತಿ ಎಂ. ಎಸ್. ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್ ಬಿ. ಎಸ್. ಕಾಯಕಲ್ಪ ವಿಭಾಗದ ಮುಖ್ಯಸ್ಥೆ ಡಾ. ರೋಹಿಣಿ ಪುರೋಹಿತ್, ಪಿಜಿ ವಿದ್ಯಾರ್ಥಿಗಳು, ಇಂಟರ್ನಿ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಅಭ್ಯಂಗ ಸಪ್ತಾಹವು ಅಕ್ಟೋಬರ್ 31ರಿಂದ ನವೆಂಬರ್ 7ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಕಾಯಕಲ್ಪ ವಿಭಾಗದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಅಭ್ಯಂಗ, ಸ್ವೇದನ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಾಂಪ್ಲಿಮೆಂಟರಿ ಪ್ಯಾಕ್ ಮುಂತಾದ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ.