ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೀಪಾವಳಿಯ ಅಂಗವಾಗಿ ಬೈಂದೂರು ಪೊಲೀಸ್ ಠಾಣೆ ಹಾಗೂ ವೃತ್ತ ನಿರೀಕ್ಷಕರ ಲಕ್ಷ್ಮೀ ಪೂಜೆ ಹಾಗೂ ಆಯುಧ ಪೂಜೆ ಕಾರ್ಯಕ್ರಮ ಗುರುವಾರ ಬೆಳಿಗ್ಗೆ ನಡೆಯಿತು.
ಬೆಳಿಗ್ಗೆ ಠಾಣೆ ಎದುರಿನ ನಾಗಬನದಲ್ಲಿ ಪೂಜೆ, ಬಳಿಕ ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಛೇರಿಗಳಲ್ಲಿ ಗಣಹೋಮ, ಲಕ್ಷ್ಮೀ ಪೂಜೆ, ಆಯುಧ ಪೂಜೆ ಜರುಗಿದವು. ಹಬ್ಬದ ಪ್ರಯುಕ್ತ ಠಾಣೆಯಲ್ಲಿ ಸಿಂಗರಿಸಲಾಗಿತ್ತು. ಪುರುಷ ಸಿಬ್ಬಂದಿಗಳು ಬಿಳಿ ಉಡುಗೆ ಹಾಗೂ ಮಹಿಳಾ ಸಿಬ್ಬಂಧಿಗಳು ನೀಲಿ ಧಿರಿಸು ಧರಿಸಿ ಹಬ್ಬದ ಸಂಭ್ರಮದಲ್ಲಿ ಭಾಗವಹಿದರು.
ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ, ಪೊಲೀಸ್ ಉಪನಿರೀಕ್ಷಕ (ಸಿವಿಲ್) ಪವನ್ ನಾಯಕ್, ಪೊಲೀಸ್ ಉಪನಿರೀಕ್ಷಕ (ತನಿಕಾಧಿಕಾರಿ) ಅನಿಲ್ ಬಿ.ಎಂ ಹಾಗೂ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.