ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರೋಟರಾಕ್ಟ್ ಡಿಸ್ಟ್ರಿಕ್ಟ್ ಕೌನ್ಸಿಲ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನ ದಾಮೋದರ ಕಿಣಿ ಮೆಮೋರಿಯಲ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ರೋಟರಾಕ್ಟ್ ಇಂಡೋರ್ ಸ್ಫೋರ್ಟ್ಸ್ ಮೀಟ್ ನಲ್ಲಿ ಭಾಗವಹಿಸಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ರನ್ನರ್ ಅಪ್ ಸ್ಥಾನವನ್ನು ಪಡೆಯಿತು.
ಅರ್ಲಿ ಬರ್ಡ್, ಅತಿ ಹೆಚ್ಚು ಸದಸ್ಯರ ಭಾಗವಹಿಸುವಿಕೆ ಸೇರಿದಂತೆ ಶ್ರೀನಿಧಿ ಮತ್ತು ವೈಷ್ಣವಿ ಹುಡುಗಿಯರ ಶಟಲ್ ಬ್ಯಾಡ್ಮಿಂಟನ್ನಲ್ಲಿ, ಪ್ರಥಮ ಸ್ಥಾನ ಪಡೆದರೆ, ಕೇರಂ ನಲ್ಲಿ ಶ್ರೇಯ ಗಾಣಿಗ ಮತ್ತು ರಂಜಿತ ಬಿಲ್ಲವ, ಚೆಸ್ ನಲ್ಲಿ ಅಗ್ನಿಶ್, ಕೇರಂ ಡಬಲ್ಸ್ ನಲ್ಲಿ ಅಗ್ನಿಶ್ ಮತ್ತು ಮನಿಶ್ ರನ್ನರ್ ಅಪ್ ಸ್ಥಾನವನ್ನು ಪಡೆದರು. ಒಟ್ಟಾರೆ ಕ್ರೀಡಾ ನಿರ್ವಹಣೆಯಲ್ಲಿ ರೋಟರಾಕ್ಟ್ ಗಂಗೊಳ್ಳಿ ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆಯಿತು.