ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಚಾರ, ವಿನೋದದೊಂದಿಗೆ ಸತತ ಎಂಟನೇ ವರ್ಷ ಆಯೋಜಿಸಲಾಗುತ್ತಿರುವ ಕಾರ್ಟೂನು ಹಬ್ಬ ಇಲ್ಲಿನ ಕಲಾಮಂದಿರದಲ್ಲಿ ಡಿ.3ರಿಂದ 5ರ ತನಕ ನಡೆಯಲಿದೆ.
ಸ್ವಾತಂತ್ರ್ಯದ 75ನೇ ವರ್ಷದ ಪ್ರಯುಕ್ತ ಭಾರತ ಮುಂದಿನ 75 ವರ್ಷಗಳು ಎಂಬ ಥೀಮ್’ನೊಂದಿಗೆ ನಡೆಯುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಕಾರ್ಟೂನ್ ಪ್ರದರ್ಶನ, ಕ್ಯಾರಿಕೇಚರ್ ತರಬೇತಿ, ಕಾರ್ಟೂನಿಗೆ ಕ್ಯಾಪ್ಟನ್ ಬರೆಯುವ ಸ್ಪರ್ಧೆ, ವಿದ್ಯಾರ್ಥಿಗಳು ಹಾಗೂ ಹೆತ್ತವರಿಗೆ ಕಾರ್ಟೂನು ಸ್ಪರ್ಧೆ, ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸ್ವರ್ಧೆ, ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ಸ್ಥಳದಲ್ಲೇ ಕ್ಯಾರಿಕೇಚರ್ ರಚನೆಯ ಚಿತ್ರನಿಧಿ, ಕೋವಿಡ್ ವಾರಿಯರ್ಸ್‌ಗಳಿಗೆ ಸನ್ಮಾನ ನಡೆಯಲಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ. ದತ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇತ್ತೀಚೆಗೆ ನಿಧನ ಹೊಂದಿದ ಚಿತ್ರನಟ ಪುನೀತ್ ರಾಜಕುಮಾರ್ ಅವರಿಗೆ ವಿವಿಧ ಕಾರ್ಟೂನಿಸ್ಟ್ ಗಳಿಂದ ವಿಶೇಷ ನೆನಪಿನ ಸರಣಿ ಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಕಾರ್ಟೂನಿಷ್ಟ್ ಸತೀಶ್ ಆಚಾರ್ಯ ತಿಳಿಸಿದ್ದಾರೆ.