ಕಾಲೇಜು ಜೀವನ ಮುಂದಿನ ಭವಿಷ್ಯಕ್ಕೆ ಕಾಲಿಡಲು ಅರ್ಹತಾ ಸುತ್ತಿದ್ದಂತೆ: ಎನ್. ಶಶಿಕುಮಾರ್ ಐಪಿಎಸ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಪ್ರತಿಯೊಬ್ಬರ ಭವ್ಯ ಭವಿತವ್ಯ ಅವರ ವಿದ್ಯಾರ್ಥಿ ಜೀವನದಲ್ಲಿ ರೂಪಿತಗೊಳ್ಳುತ್ತದೆ. ಶೈಕ್ಷಣಿಕ ಜೀವನದ ಪ್ರತಿ ಕ್ಷಣವನ್ನು ಸದುಪಯೋಗ ಪಡಿಸಿಕೊಂಡು, ಗುರಿಯೆಡೆಗೆ ಅಹರ್ನಿಶಿ ಶ್ರಮಿಸಿದಾಗ ಸುಂದರ ನಾಳೆಗಳು ನಿರ್ಮಾಣಗೊಳ್ಳುತ್ತವೆ ಎಂದು ಮಂಗಳೂರು ನಗರ ಪೋಲೀಸ್ ಕಮೀಷನರ್ ಎನ್. ಶಶಿಕುಮಾರ್ ಐಪಿಎಸ್ ತಿಳಿಸಿದರು.

Call us

Click Here

ಅವರು, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಗ್ ವಿದ್ಯಾರ್ಥಿಗಳ ಪ್ರವೇಶಾತಿ ಆಳ್ವಾಸ್ ಆಗಮನ 2021-22ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಮಯ ಪಾಲನೆ, ಶಿಸ್ತು, ತಾಳ್ಮೆ, ಪ್ರಾಮಾಣಿಕತೆ, ಏಕಾಗ್ರತೆ ಪ್ರತಿಯೊಬ್ಬರ ಯಶಸ್ವಿ ಜೀವನದ ಗುಟ್ಟು. ಪ್ರತಿ ಕ್ರಿಯೆಗೂ ಪ್ರತಿಕ್ರಿಯಿಸುವ ಮನಸ್ಥಿತಿ ಒಳ್ಳೆದಲ್ಲಾ. ಇದರಿಂದ ನಮ್ಮ ಸುತ್ತಾ ವೈರತ್ವವನ್ನು ಬೆಳೆಸಿಕೊಳ್ಳುವ ಸಾಧ್ಯತೆಯೆ ಹೆಚ್ಚು. ಇನ್ನೊಬ್ಬರ ಮೇಲೆ ಅನಗತ್ಯ ಟೀಕೆ- ಟಿಪ್ಪಣಿ, ಆಜ್ಞೆಗಳನ್ನು ಮಾಡಬೇಡಿ. ನಿಮ್ಮ ನಿಜವಾದ ವ್ಯತಿತ್ವವನ್ನೆ ಜಗತ್ತಿಗೆ ಪರಿಚಯಿಸಿ, ಸೋಗಿನ ವ್ಯಕ್ತಿತ್ವ ಹೆಚ್ಚು ದಿನ ಬಾಳಲಾರದು. ಪ್ರತಿದಿನ ನಿಮ್ಮ ಜೀವನಕ್ಕೆ ಮೌಲ್ಯಯುತ ಅಂಶವನ್ನು ಸೇರ್ಪಡೆಗೊಳಿಸುತ್ತಾ ಸಾಗಿ. ಯಾರು ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡುವುದಿಲ್ಲವೋ ಅವರು ಸಮಯದ ಅಭಾವವನ್ನು ಎದುರಿಸುವವರು. ಬಾಲ್ಯದಲ್ಲೆ ನಾಯಕತ್ವದ ಗುಣ ಆಳವಡಿಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ. ಕಠಿಣ ಪರಿಶ್ರಮವೇ ರಾಜಮಾರ್ಗ ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಯುಪಿಎಸ್ಸಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುದರಿಂದ ಅರ್ಹ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಿರಾತಂಕವಾಗಿ ಉತ್ತೀರ್ಣ ಹೊಂದಬಲ್ಲರು ಎಂದರು. ವೃತಿಪರತೆಗೆ ಸಂಬಂದಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ಎಂದೂ ವೃತ್ತಿಧರ್ಮವನ್ನು ಮೀರಿ ನಡೆದಿಲ್ಲ ಏಂದು ಉದಾಹರಣೆಗಳೊಂದಿಗೆ ಮನದಟ್ಟು ಪಡಿಸಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಎಐಇಟಿಯ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ ಪ್ರಮೀಳಾ ಕೊಲ್ಕೆ ಕರ್ಯಕ್ರಮ ನಿರ್ವಹಿಸಿದರು.

Click here

Click here

Click here

Click Here

Call us

Call us

Leave a Reply