ನ.21ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ, ಕಾರ್ಯಕಾರಿ ಮಂಡಳಿ ಹಾಗೂ ಜಿಲ್ಲಾಧ್ಯಕ್ಷರ ಚುನಾವಣೆಯು ನ.21ರಂದು ನಡೆಯಲಿದ್ದು, ಸಾಹಿತ್ಯ ವಲಯದಲ್ಲಿ ಪರಿಷತ್ ಗಾದಿಗಾಗಿ ಪ್ರಬಲ ಪೈಪೋಟಿ ನಡೆಯುತ್ತಿದೆ.

Call us

Click Here

ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರ ಚುನಾವಣೆಗೆ ಉಡುಪಿ ತಾಲೂಕಿನ ಕೆ. ಎಸ್ ಸುಬ್ರಹ್ಮಣ್ಯ ಬಾಸ್ರಿ, ಬೈಂದೂರು ತಾಲೂಕಿನ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ಹಾಗೂ ಉಡುಪಿ ತಾಲೂಕಿನಿಂದ ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನಾಮಪತ್ರಗಳನ್ನು ಸಲ್ಲಿಸಿದ್ದು, ಅಂತಿಮ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

1987 ಮತದಾರರು:
ನವೆಂಬರ್ 21 ರಂದು ಒಟ್ಟು 8 ಮತಗಟ್ಟೆ ಕೇಂದ್ರಗಳಲ್ಲಿ (ತಾಲೂಕು ತಹಶೀಲ್ದಾರರ ಕಛೇರಿ, ಬೈಂದೂರು ಪಟ್ಟಣ ಪಂಚಾಯತ್ ಕಛೇರಿ) ಬೆಳಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 1987 ಮಂದಿ ಮತದಾರರಿದ್ದಾರೆ. ಆ ಪೈಕಿ 250 ಹೆಚ್ಚು ಮತದಾರರು ಮರಣ ಹೊಂದಿದ್ದು, ಉಳಿದ ಮತಗಳಲ್ಲಿ ಒಟ್ಟು ಶೇ.60ರಷ್ಟು ಮತದಾನವಾಗುವ ನಿರೀಕ್ಷೆ ಇದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರುವವರು ಮತದಾರರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಡೆದ ಅಭ್ಯರ್ಥಿಗಳ ಗುರುತು ಚೀಟಿ ಅಥವಾ ಭಾರತದ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳಲ್ಲಿ ಯಾವುದಾದರು ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ.

ಅಂದೇ ಫಲಿತಾಂಶ ಘೋಷಣೆ:
ಮತದಾನ ಮುಗಿದ ಕೂಡಲೇ ಆಯಾ ಮತಗಟ್ಟೆಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲಾ ಸಹಾಯಕ ಚುನಾವಣಾಧಿಕಾರಿಯವರಿಂದ ಮತ ಎಣಿಕೆ ವಿವರವನ್ನು ಅಧಿಕೃತ ನಮೂನೆಯಲ್ಲಿ ಪಡೆದು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮತ ಎಣಿಕೆ ವಿವರಗಳನ್ನು ಬೆಂಗಳೂರಿನ ಕೇಂದ್ರ ಚುನಾವಣಾ ಕಚೇರಿಗೆ ಫಲಿತಾಂಶ ಘೋಷಣೆ ಮಾಡಲು ಕಳುಹಿಸಲಾಗುತ್ತದೆ.

Click here

Click here

Click here

Click Here

Call us

Call us

ಕನ್ನಡತನ ಉಳಿಸಿ-ಬೆಳೆಸುವ ಕಾರ್ಯವಾಗಲಿ:
ಸಾಹಿತ್ಯ ಪರಿಷತ್ತು ಎಂದರೆ ಕನ್ನಡದ ಅಸ್ಮಿತೆ ಎಂದು ಪರಿಭಾವಿಸಲಾಗುತ್ತದೆ. ಮೇರು ಸಾಹಿತಿ, ಸಂಘಟಕರುಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗದ್ದುಗೆಯೇರಿ ಕನ್ನಡಕ್ಕಾಗಿ ಶ್ರಮಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಎ.ಎಸ್.ಎನ್ ಹೆಬ್ಬಾರ್, ಚಂದ್ರಶೇಖರ ಹೊಳ್ಳ, ಅಂಬಾತನಯ ಮುದ್ರಾಡಿ ಅವರಂತಹ ಸಾಹಿತಿಗಳು ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಅವಧಿಯಲ್ಲಿಯೂ ಸಾಕಷ್ಟು ಕನ್ನಡದ ಕಾರ್ಯಕ್ರಮಗಳಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಅದರಲ್ಲಿಯೂ ಜಿಲ್ಲಾ ತಾಲೂಕು ಸಮ್ಮೇಳನಗಳು ಕಳೆಗುಂದುತ್ತಿವೆ ಹಾಗೂ ಪರಿಷತ್ತಿನ ಉನ್ನತ ಹುದ್ದೆಗಳು ಕೆಲವೇ ಜಾತಿಗೆ ಸೀಮಿತವಾಗಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಶಾಲಾ ವಿದ್ಯಾರ್ಥಿಗಳನ್ನಷ್ಟೇ ಸೇರಿಸಿಕೊಂಡು ನಡೆಸುವ ಸಾಹಿತ್ಯ ಕಾರ್ಯಕ್ರಮಗಳು ನಾಗರಿಕರನ್ನು ಒಳಗೊಳ್ಳಲು ವಿಫಲವಾಗುತ್ತಿದೆ ಅಪವಾದವೂ ಪರಿಷತ್ತಿನ ಮೇಲಿದೆ. ಸಂಖ್ಯೆ, ದಾಖಲೆಗಷ್ಟೇ ಕನ್ನಡದ ಕಾರ್ಯಕ್ರಮಗಳನ್ನು ನಡೆಸದೇ ಸಾಹಿತ್ಯ ಪರಿಷತ್ತಿನತ್ತ ಕನ್ನಡಿಗರನ್ನು ಸೆಳೆಯುವ, ಎಲ್ಲರನ್ನೂ ಒಳಗೊಳ್ಳುವ, ಕನ್ನಡತನ ಬೆಳೆಸುವ ಕಾರ್ಯವಾದರೆ ಪರಿಷತ್ತು ಮತ್ತಷ್ಟು ಸದೃಢಗೊಳ್ಳಲಿದೆ ಎಂಬುದು ಕನ್ನಡಿಗರ ಅಂಬೋಣ.

Leave a Reply