ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಿರಿಮಂಜೆಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಗ್ರಂಥಾಲಯಕ್ಕೆ ಸಂಸ್ಥೆಯ ಹಿತೈಷಿ ಹಾಗೂ ಮುಂಬೈನ ಹರಡಿನ್ ಕೊಲಿನ್ಸ್ ಪಬ್ಲೀಷರ್ಸ್ ಇಂಡಿಯಾ ಲಿಮಿಟೆಡ್ ಇದರ ಉಪ ವ್ಯವಸ್ಥಾಪಕರಾದ ದಿವಂಗತ ವಿನಯ್ ಅಂಚನ್ ಕುಟುಂಬಿಕರು ಶಾಲೆಯ ಗ್ರಂಥಾಲಯಕ್ಕೆ 6,500 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ನಾಗೂರಿನ ಸಮಾಜ ಸೇವಕರು ಹಾಗೂ ವಡೇರಮಠ ಮಾಲಕರಾದ ಮಂಜುನಾಥ ಉಡುಪ ಅವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಿದರು.
ಈ ಸಂಧರ್ಭ ಶಾಲಾ ಆಡಳಿತ ಮಂಡಳಿ ಸದಸ್ಯರಾದ ರಾಮಕೃಷ್ಣ ಬಿಲ್ಲವ, ರಾಜೀವ ಶೆಟ್ಟಿ ಮುಖ್ಯ ಶಿಕ್ಷಕರಾದ ರವಿದಾಸ ಶೆಟ್ಟಿ, ಪಾಲಕರು, ವಿದ್ಯಾರ್ಥಿ ಪ್ರತಿನಿದಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.