ಕೋಟ: ಶಿವರಾಮ ಕಾರಂತ ಬಾಲ ಪ್ರಶಸ್ತಿ ಪ್ರದಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಪೋಷಕರು ತಾವು ಪೋಷಕರು ಎನ್ನುವ ಅಧಿಕಾರದಿಂದ ಮಕ್ಕಳ ಮೇಲೆ ಒತ್ತಡ ಹೇರದೆ ಮಕ್ಕಳಲ್ಲಿನ ಆಸಕ್ತಿ ಕ್ಷೇತ್ರ ಗುರುತಿಸಿ ಅದರಲ್ಲಿ ಅವರನ್ನು ತೊಡಗಿಸಿಕೊಳ್ಳುವುದಕ್ಕೆ ಪ್ರೇರೇಪಿಸುವ ಕೆಲಸ ಮಾಡಬೇಕು. ಮಕ್ಕಳಲ್ಲಿನ ಸೂಕ್ತ ಪ್ರತಿಭೆ ಹೊರಹೊಮ್ಮಲು ಸೂಕ್ತವಾದ ವೇದಿಕೆ ಅಗತ್ಯ, ಈ ನಿಟ್ಟಿನಲ್ಲಿ ಕಾರಂತ ಥೀಮ್ ಪಾರ್ಕ್ ಕಾರ್ಯವೆಸಗುತ್ತಿರುವುದು ಶ್ಲಾಘನೀಯ ಎಂದು ಸಾಂಸ್ಕೃತಿಕ ಚಿಂತಕಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಅವರು ಹೇಳಿದರು.

Call us

Click Here

ಅವರು ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿಲುಮೆ-೨೦೨೧(ಭರವಸೆಯ ತಂಗಾಳಿ) ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ ಕುಂಭಾಶಿ ವಿದ್ಯಾರ್ಥಿನಿ ಶ್ಲಾಘ ಸಾಲಿಗ್ರಾಮ, ಯು.ಬಿ,ಎಂ.ಸಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದ ವಿದ್ಯಾರ್ಥಿನಿ ಸಿಂಚನ ಕೋಟೇಶ್ವರ, ಮಾಧವ ಕೃಪಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಣಿಪಾಲದ ವಿದ್ಯಾರ್ಥಿನಿ ಲಾವಣ್ಯ ಟಿ, ಶ್ರೀಗಜಾನನ ಹಿರಿಯ ಪ್ರಾಥಮಿಕ ಶಾಲೆ ಪಾರಂಪಳ್ಳಿಯ ವಿದ್ಯಾರ್ಥಿ ವೈಭವ್ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣೂರು ವಿದ್ಯಾರ್ಥಿ ಶ್ರೀನಿಧಿ, ಲಿಟ್ಲರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿ ನಕ್ಷತ್ರ ಎನ್ ಕೋಟ, ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ಪ್ರಣ್ವಿತ್ ಪಿ, ಶ್ರೀಶಾಂಭವಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಗಿಳಿಯಾರು-ಕೋಟದ ವಿದ್ಯಾರ್ಥಿನಿ ಇಂಚರ ಭಟ್, ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪಾರಂಪಳ್ಳಿಯ ವಿದ್ಯಾರ್ಥಿನಿ ಧನ್ಯ, ಶ್ರೀರಾಮ ಪ್ರಸಾದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಣೂರು ವಿದ್ಯಾರ್ಥಿನಿ ಕಾವ್ಯ, ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಾರ್ಕಡ ವಿದ್ಯಾರ್ಥಿ ನಿಧೀಶ್ ಭಟ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ ವಿದ್ಯಾರ್ಥಿ ನಿತೇಶ್ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟತಟ್ಟು ವಿದ್ಯಾರ್ಥಿನಿ ಮೈತ್ರಿ, ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿನಿ ಸಾನ್ವಿತ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟದ ವಿದ್ಯಾರ್ಥಿ ಶ್ರೀಜಿತ್ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.

ಅಂಚೆ ಚೀಟಿ ಪ್ರದರ್ಶನ ಮಾಡಿದ ಲಕ್ಷೀನಾರಾಯಣ ನಾಯಕ್ ಕಲ್ಯಾಣಪುರ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸಂಜೀವ್ ಜಿ. ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಕೆ.ಪಿ ಶೇಖರ್, ವಿವೇಕ ಬಾಲಕಿರ ಫ್ರೌಡಶಾಲೆಯ ಮುಖ್ಯೋಪಾಧ್ಯಯ ಜಗದೀಶ್ ಹೊಳ್ಳ, ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ನಾವಡ, ಸಮ್ಮೇಳನಾಧ್ಯಕ್ಷ ರೋಶನ್ ಗಿಳಿಯಾರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿ, ಶಿಕ್ಷಕ ಕುಮಾರ್ ಸ್ವಾಗತಿಸಿ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ವಂದಿಸಿದರು.

Click here

Click here

Click here

Click Here

Call us

Call us

Leave a Reply