ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ ಸಿಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ (ಸ್ಪೇಸ್) ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನ. 2021ರಲ್ಲಿ ನಡೆಸಿದ ಸಿಎಸ್ ಫೌಂಡೇಶನ್ ಸಿಎಸ್ಇಇಟಿ ಪರೀಕ್ಷೆ ಬರೆದ 38 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ತೇರ್ಗಡೆ ಹೊಂದುವುದರ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಕಾರ್ತಿಕ್ ಕೆ 171, ತೇಜಸ್ 169, ಧ್ವನಿ ಶೆಟ್ಟಿ 169, ಅಂಬಿಕ 169, ರಾಮನಾಥ್ 163, ಶಮಿತ ಶೆಟ್ಟಿ 146, ನಿಶಾ 145, ನಿಖಿಲ್ 137, ನಿಶಾಂತ್ ಕೊಟಾರಿ 134, ಪುಷ್ಪ 133, ದೀಪ 133, ವಿಜೇತ ಹೆಗ್ಡೆ 132, ಸಿಂಚನ 131, ಯತೀಶ್ 130, ಕೀರ್ತನ 129, ವರ್ಷ 126, ಶೃತಿ 126, ಗೋಪಾಲಕೃಷ್ಣ ವರ್ಣ 126, ಸಾತ್ವಿಕ್ 125, ಕೆ ಅನುರಾಗ್ ಶೆಟ್ಟಿ 125, ಪ್ರತಿಕ್ಷ ಎನ್ 121, ಸುನೈನ 120, ವೈಷ್ಣವಿ ಶೆಟ್ಟಿ 119, ವೈಷ್ಣವಿ 114, ವರುಣ್ ರವೀಂದ್ರ 113, ಸರ್ಜಿತ್ ಶೆಟ್ಟಿ 113, ನಿಶಾಂತ್ ಶೆಟ್ಟಿ 113, ಮೊಹಮ್ಮದ್ ಮುಜಮಿಲ್ 112, ಆಕಾಶ್ ಜಿ ದೇವಾಡಿಗ 112, ನಿಶ್ಮಿತ ಎಸ್ 110, ಹರ್ಷಿತ 109, ಭೂಮಿಕ 103, ರಕ್ಷಿತಾ 102, ವಿಧಾತ್ರಿ 100 ಅಂಕಗಳೊಂದಿಗೆ ಪ್ರಥಮ ಪ್ರಯತ್ನದಲ್ಲಿ ಸಿಎಸ್ ಫೌಂಡೇಶನ್ ಸಿಎಸ್ಇಇಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಶಿಕ್ಷ ಪ್ರಭ ಅಕಾಡೆಮಿಯು ಸಿಎ/ಸಿಎಸ್ ಮತ್ತು ಬ್ಯಾಂಕಿಂಗ್ ಪರೀಕ್ಷೆಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿದ್ದು ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಸಿಎ/ಸಿಎಸ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈದು ಉನ್ನತ ಹುದ್ದೆಯಲ್ಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರು, ಕೋವಿಡ್ ಕಾರಣದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಹೊಡೆತ ಬಿದ್ದರು ಸಂಸ್ಥೆಯು ಆನ್ ಲೈನ್ ಮೂಲಕ ತರಗತಿಯನ್ನು ನಡೆಸಿ ಅನಂತರ ಆಫ್‌ಲೈನ್ ನಲ್ಲಿ ಪುನರಾವರ್ತಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಗೊಳಿಸಿತ್ತು. ನಮ್ಮ ವಿದ್ಯಾರ್ಥಿಗಳ ಸಾಧನೆಗೆ ಅವರ ಕಠಿಣ ಪರಿಶ್ರಮ, ನಮ್ಮ ಬೋಧಕ ಸಿಬ್ಬಂದಿಗಳ ಅವಿರತ ಶ್ರಮ ಕಾರಣ, ನಮ್ಮ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು ಹಾಕಿದ ಶ್ರಮಕ್ಕೆ ಇಂದು ಫಲ ನೀಡಿದೆ ಎನ್ನುತ್ತಾ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳನ್ನು ಅಭಿನಂದಿಸಿದರು. ಸಿಎ ಮತ್ತು ಸಿಎಸ್ ಪರೀಕ್ಷೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ರಸ್ತೆಯ ಶಿಕ್ಷ ಪ್ರಭ ಅಕಾಡೆಮಿಯ ಕಛೇರಿ ಅಥವಾ www.shikshaprabha.com ಗೆ ಲಾಗಿನ್ ಮಾಡಬಹುದು ಎಂದರು.
ಶಿಕ್ಷ ಪ್ರಭ ಅಕಾಡೆಮಿಯು ನಮಗೆ ಅನುಭವಿ ಶಿಕ್ಷಕರಿಂದ ನಿರಂತರವಾಗಿ ತರಬೇತಿ ನೀಡಿದ್ದು ನಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿಸಿತು. 200 ರಲ್ಲಿ 171 ಅಂಕ ಗಳಿಸುವ ನಿರೀಕ್ಷೆ ಇರಲಿಲ್ಲ ಆದರೆ ನಿರಂತರ ಪ್ರಯತ್ನ ಇತ್ತು. ಗುಣಮಟ್ಟದ ಶಿಕ್ಷಣದ ಜೊತೆಗೆ ಅತೀ ಹೆಚ್ಚು ಪೂರಕ ಪರೀಕ್ಷೆಗಳನ್ನು ನಡೆಸಿ ನಮ್ಮನ್ನು ಸಿದ್ಧಗೊಳಿಸಿದ ನಮ್ಮ ಹೆಮ್ಮೆಯ ಶಿಕ್ಷ ಪ್ರಭ ಅಕಾಡೆಮಿಗೆ ನಾವು ಅಭಾರಿಯಾಗಿದ್ದೇವೆ. – ಕಾರ್ತಿಕ್ ಕೆ. ಸಿಎಸ್ ಫೌಂಡೇಶನ್ ಉತ್ತೀರ್ಣ ವಿದ್ಯಾರ್ಥಿ