ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕೇಂದ್ರದ ರುಪೀ ಮಾಲ್ ಕಟ್ಟಡದಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಪವರ್ ಜಿಮ್ ಮತ್ತು ಫಿಟ್‌ನೆಸ್ಸೆಂಟರ್ ಇದೀಗ ಉಪ್ಪುಂದದಲ್ಲಿ ತನ್ನ ಶಾಖೆ ತೆರೆಯುತ್ತಿದ್ದು ನ.24ರಂದು ಶುಭಾರಂಭಗೊಳ್ಳಲಿದೆ.
ಉಪ್ಪುಂದ ಕಂಚಿಕಾನ್ ರಸ್ತೆಯಲ್ಲಿರುವ ವೈಶಾಲಿ ರೆಸ್ಟೋರೆಂಟ್ ಕಟ್ಟಡದಲ್ಲಿ ನ.24ರ ಬೆಳಿಗ್ಗೆ 10:30ಕ್ಕೆ ಪವರ್ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಉದ್ಘಾಟನೆಗೊಳ್ಳಲಿದೆ.
ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರು ಜಿಮ್ ಉದ್ಘಾಟಿಸಲಿದ್ದು, ವೈದ್ಯ ಡಾ. ಪ್ರವೀಣ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಟ್ಟಡ ಮಾಲಿಕ ಬಿ. ವಜುರಾಜ ಶೆಟ್ಟಿ, ರುಪೀ ಮಾಲ್ ಸಿಇಓ ರಾಜೀವ ಕುಮಾರ್, ಪತ್ರಕರ್ತ ಅರುಣ ಕುಮಾರ್, ಸುಮುಖ ಗ್ರೂಫ್ ಸಿಇಓ ಬಿ. ಎಸ್. ಸುರೇಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಮಾಲಿಕ ವಿಘ್ನೇಶ್ ಅವರು ತಿಳಿಸಿದ್ದಾರೆ.