ಕುಂದಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ಮಹಾಗಣಪತಿ ಸೆಲೆಕ್ಟ್ ತಂಡ ರಿ. ಮಟ್ನಕಟ್ಟೆ-ಕೆರ್ಗಾಲ್ ಇವರ ಆಶ್ರಯದಲ್ಲಿ 19 ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಯಾನೆ ಶ್ರೀಗಣೇಶನ ಗೊಂಬೆಯಾಟ ಮಂಡಳಿ ಇವರಿಂದ ಚೂಡಾಮಣಿ ಲಂಕಾದಹನ ಎನ್ನುವ ಗೊಂಬೆಯಾಟ ಯಕ್ಷಗಾನ ಪ್ರಸಂಗ ಶ್ರೀ ಮಹಾಗಣಪತಿ ದೇವಸ್ಥಾನ ಮಟ್ನಕಟ್ಟೆ-ಕೆರ್ಗಾಲ್ ನಲ್ಲಿ ನಡೆಯಿತು.
ಈ ಸಂದರ್ಭ ಗೊಂಬೆಯಾಟ ಅಕಾಡೆಮಿಯ ಮುಖ್ಯಸ್ಥರಾದ ಭಾಸ್ಕರ ಕೊಗ್ಗ ಕಾಮತ್ ಅವರನ್ನು ಎಸ್ಎಂಎಸ್ ತಂಡದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ತಂಡದ ಅಧ್ಯಕ್ಷರಾದ ಪಾಂಡುರಂಗ ದೇವಾಡಿಗ, ಉಪಾಧ್ಯಕ್ಷರಾದ ನಜೀರ್ ಉಪ್ಪುಂದ,ಕೋಶಾಧಿಕಾರಿ ಸುನಿಲ್ ಕುಮಾರ್, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸನ್ಮಾನಿಸಿ ಗೌರವಿಸಲಾಯಿತು. ಸಂಘಟನಾ ಕಾರ್ಯದರ್ಶಿ ಗಣೇಶ್ ಆರ್.ಎಮ್. ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಮೊಗವೀರ ವಂದಿಸಿದರು.