ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಆಳ್ವಾಸ್ ಪಾರಂಪರಿಕ ಔಷಧ ಭಂಡಾರ ಮತ್ತು ಸಂಶೋಧನಾ ಕೇಂದ್ರದ (ಆತ್ಮ ರಿಸರ್ಚ ಸೆಂಟರ್) ಉನ್ನತೀಕರಿಸಿದ ನೂತನ ಪ್ರಯೋಗಾಲಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ ಎಂ. ಮೋಹನ್ ಆಳ್ವ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಶೋದನಾ ಕೇಂದ್ರದ ಮೂಲಕ ವಿವಿಧ ಔಷಧೀಯ ಸಸ್ಯಗಳ ವಿಶೇಷ ಸಂಶೋದನೆ ಮಾಡಿ ಅದರಲ್ಲಿರುವ ರಾಸಾಯನಿಕ ಸಂಘಟನೆಗಳನ್ನು ವಿಘಟಿಸಿ, ಚಿಕಿತ್ಸೆಗೆ ಉಪಯೋಗಿಸುವ ಅಂಶಗಳನ್ನು ಸಂಗ್ರಹಿಸಿ, ಔಷಧಗಳ ಮೂಲಕ ಜನ ಸಾಮಾನ್ಯರಿಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಆತ್ಮ ರಿಸರ್ಚ ಸೆಂಟರ್‌ನ ನಿರ್ದೇಶಕ ಡಾ ಸುಬ್ರಮಣ್ಯ ಪದ್ಯಾಣ ಸ್ವಾಗತಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ‍್ಯ ಡಾ ಸಜಿತ್ ಎಂ, ಆತ್ಮ ರಿಸರ್ಚ ಸೆಂಟರ್‌ನ ಸಂಯೋಜಕರಾದ ಡಾ ಸೌಮ್ಯ ಸರಸ್ವತಿ, ಡಾ ರೋಹನ್ ಫೆರ್ನಾಂಡೀಸ್, ಡಾ ಅಂಜಲಿ ಕುಮಾರಿ ಉಪಸ್ಥಿತರಿದ್ದರು.