ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಸಿಆರ್‌ಝೆಡ್‌ನಲ್ಲಿ ಗುರುತಿಸಲಾಗಿ ರುವ ಮರಳುಗಾರಿಕೆ ದೋಣಿ ಹಾಗೂ ಮರಳು ಸಾಗಾಟ ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ತಂತ್ರಾಂಶ ನಿಯಂತ್ರಣ ಹಾಗೂ ಉಲ್ಲಂಘನೆ ಬಗ್ಗೆ ಪರಿಶೀಲಿಸಲು ಜಿಪಿಎಸ್ ಮಾನಿಟರಿಂಗ್ ಸೆಂಟರ್ ಆರಂಭಿಸಲಾಗಿದೆ ಎಂದು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ 24X7 ಅಲರ್ಟ್ ಆಗಿರುವಂತೆ ಈ ಸೆಂಟರ್ನ್ನು ಎನ್ಐಸಿ, ಇ-ಗವರ್ನೆನ್ಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಪ್ರಾರಂಭಿಸಲಾಗಿದೆ. ಈ ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆ 0820-2950088 ಆಗಿದ್ದು, ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಹಾಗೂ ದಾಸ್ತಾನು ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿ ಗಳನೊಳಗೊಂಡ ಚಾಲಿತ ದಳ ರಚಿಸಲಾಗಿದೆ ಎಂದರು.
ಕುಂದಾಪುರ, ಬ್ರಹ್ಮಾವರ, ಉಡುಪಿ ತಾಲೂಕು ವ್ಯಾಪ್ತಿಯ ವಾರಾಹಿ, ಸೌಪರ್ಣಿಕಾ, ಸ್ವರ್ಣಾ ಮತ್ತು ಸೀತಾನದಿ ಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾಠ್ಯ ಹಾಗೂ ನಾನ್ ಸಿಆರ್ ಸಿಆರ್‌ಝೆಡ್‌ನಲ್ಲಿ ಮರಳು ಗಣಿ ಗುತ್ತಿಗೆಗಳಲ್ಲಿ ಮರಳು ಪೂರೈಕ ಕಾರ್ಯ ಪ್ರಗತಿಯಲ್ಲಿದೆ. ಈ ಮರಳನ್ನು ಅಭಿವೃದ್ದಿ ಕಾಮಗಾರಿಗಳಿಗೆ ಉಡುಪಿ ಸ್ಯಾಂಡ್ ಆ್ಯಪ್ ಮೂಲಕ ಪೂರೈಸಲಾಗುತ್ತಿದೆ. ಅವಶ್ಯಕತೆ ಇರುವವರು ಅಂತರ್ಜಾಲದ (udupiesand.com) ದಾಖಲಿಸಿ ಮರಳಿನ ಪ್ರಮಾ ನಮೂದಿಸಿ ಆನ್‌ಲೈನ್ ಮುಖಾಂತರ ಹಣ ಪಾವತಿಸಬೇಕು ಸಾಂಡ್ ಆಫ್ ಸಂಪರ್ಕ ಸಂಖ್ಯೆ 6366745888, 634024555, 6366871888 ಎಂದು ಪ್ರಕರಣೆ ತಿಳಿಸಿದೆ.