ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ವಾರ್ಷಿಕ ಮಹಾಸಭೆ ಸಾಸ್ತಾನದ ಶಿವಕೃಪಾ ಕಲ್ಯಾಣ ಪಂಟದಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ ಶ್ರೀಧರ್ ಜಿ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2021ರ ಆರ್ಥಿಕ ವ್ಯವಹಾರಕೆ ಶೇ97.18ರಷ್ಟು ಸಾಲ ವಸೂಲಾತಿಯಾಗಿದ್ದು ಆಡೀಮ ವರ್ಗೀಕರಣ ಎ ತರಗತಿಯದ್ದಾಗಿರುತ್ತದೆ ಎಂದು ತಿಳಿಸಿದರು. ವರದಿ ಸಾಲಿನಲ್ಲಿ ಸಂಘವು ೮೮ ಲಕ್ಷಕ್ಕೂ ಮಿಕ್ಕಿ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 15% ಡಿವಿಡೆಂಟ್ ಘೋಷಿಸಲಾಯಿತು. ಸದಸ್ಯರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಲಾಗುವುದು ಎಂದರು.
ಈ ಸಂದರ್ಭ ಕಾರ್ಯವ್ಯಾಪ್ತಿಯ ಹಿರಿಯ ಕೃಷಿಕರಾದ ಜಗದೀಶ ಕಾರಂತ ಐರೋಡಿ, ನಾರಾಯಣ ಮರಕಲ ಪಾಂಡೆಶ್ವರ, ಜುಲಿಯಸ್ ಎಂ. ರೋಚ್, ಮೈಕಲ್ ಡಿಸೋಜ ಬಾಳ್ಕುದ್ರು, ಸದಾಶಿವ್ ಪೂಜಾರಿ ಪಾಂಡೆಶ್ವರ ಇವರಿಗೆ ಆಧುನಿಕ ರೈತ ಪದ್ದತಿಯ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಾಗೂ 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ85 ಹಾಗೂ 85ಕ್ಕಿಂತ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು.
ಈ ಸಂದರ್ಭ ಸಂಘದ ನಿರ್ದೇಶಕರಾದ ಸುರೇಶ್ ಅಡಿಗ, ರಾಜಶೇಖರ, ರಮೇಶ್ ಕಾರಂತ, ಗೋವಿಂದ ಪೂಜಾರಿ, ಸಂತೋಷ್ ಪೂಜಾರಿ, ಕಮಲ ಆಚಾರ್, ಗೀತಾ, ಉದಯ್ ಮರಕಾಲ, ಶೇಖರ್ ಗದ್ದೆಮನೆ, ಡೆರಿಕ್‌ಡಿಸೋಜ ಉಪಸ್ಥಿತರಿದ್ದರು. ಉಪಾದ್ಯಕ್ಷ ಆನಂದ ಗಾಣಿಗ ಸ್ವಾಗತಿಸಿ, ಸಂಘದ ಸಿಇಓ ವಿಜಯ ಪೂಜಾರಿ ವರದಿ ವಾಚಿಸಿದರು, ನಿರ್ದೇಶಕ ರಮೇಶ್ ಕಾರಂತ ವಂದಿಸಿದರು, ಸಿಬ್ಬಂದಿ ಕೇಶವ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.