ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಪರವಾನಗಿ ನೀಡಲು ಮೀನಮೇಷ ಎಣಿಸುತ್ತಿರುದನ್ನು ವಿರೋಧಿಸಿ ಯಕ್ಷಗಾನ ಪ್ರಿಯರ ಒಕ್ಕೂಟವು ಸಹಾಯಕ ಕಮಿಷನರ್‌ಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ ನೆಹರೂ ಮೈದಾನ ಯಕ್ಷಕಾಶಿ ಎಂದೇ ಗುರುತಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಪ್ರಿಯರು ಇಲ್ಲಿನ ಯಕ್ಷ ಸೊಬಗು ಸವಿಯಲು ಬರುತ್ತಾರೆ. 2016ರಲ್ಲಿ ಏಕಾಏಕಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಪ್ರತಿಭಟನೆ ನಡೆದಾಗ ಮತ್ತೆ ಅನುಮತಿ ನೀಡಲಾಗಿತ್ತು. ಇದೀಗ ಮತ್ತದೇ ಪರಿಸ್ಥಿತಿ ಎದುರಾಗಿದೆ.
ಕೋವಿಡ್‌ನಿಂದ ಸಂಕಷ್ಟ ಎದುರಿಸಿರುವ ಯಕ್ಷಗಾನ ರಂಗ ಮೈಕೊಡವಿ ಏಳುತ್ತಿರುವಾಗಲೇ ತಾಲೂಕು ಆಡಳಿತ ಯಕ್ಷಗಾನ ಪ್ರದರ್ಶನ ಪರವಾನಗಿ ನೀಡಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಅನುಮತ ನಿರಾಕರಿಸಿದ್ದೇ ಆದಲ್ಲಿ ಉಗ್ರ ಹೋರಾಟದ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಚ್ಚರಿಸಿದರು.
ಕಲಾಕ್ಷೇತ್ರ ಅಧ್ಯಕ್ಷ ಕಿಶೋರ್ಕುಮಾರ್, ಸಾಲಿಗ್ರಾಮ ಮೇಳದ ಯಜಮಾನ ಕಿಶನ್ಕುಮಾರ ಹೆಗ್ಡೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಯಕ್ಷ ಸೊಬಗು ಅಧ್ಯಕ್ಷ ಶಶಿಧರ ಹೆಮ್ಮಾಡಿ, ಹಿರಿಯ ಪತ್ರಕರ್ತ ರಾಮಕೃಷ್ಣ ಹೇರ್ಳೆ, ಯಶಸ್, ಕಲಾವೃಂದದ ಪ್ರಮುಖ ವೆಂಕಟೇಶ ವೈದ್ಯ, ಕೋಟೇಶ್ವರ ಗ್ರಾಪಂ ಮಾಜಿ ಅಧ್ಯ ರಾಜಶೇಖರ ಶೆಟ್ಟಿ, ಸದಸ್ಯ ರಾಯನ್ಸ್ ಡಿಮೆಲ್ಲೊ, ಕಲಾ ಸಂಘಟಕ ಪ್ರಶಾಂತ್ ಮಲ್ಯಾಡಿ, ನರಸಿಂಹ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.