ಕುಂದಾಪುರ: ಮಂಗಳೂರು ವಿ.ವಿ ವ್ಯಾಪ್ತಿಯ ಕಾಲೇಜು ಉಪನ್ಯಾಸಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಮಾಹಿತಿ ಕಾರ್ಯಾಗಾರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಕುಂದಾಪುರದ ಸುತ್ತಮುತ್ತಲಿನ ಸರಕಾರಿ ಅನುದಾನಿತ ಖಾಸಗಿ ಮತು ಅನುದಾನರಹಿತ ಖಾಸಗಿ ಕಾಲೇಜುಗಳ ಪ್ರಾಂಶುಪಾಲರುಗಳು ಮತ್ತು ಉಪನ್ಯಾಸಕರಿಗಳಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಕಾರ್ಯಾಗಾರವನ್ನು ಹಮ್ಮಿಕೊಂಡಿತು.

Call us

Click Here

ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಇರುವ ಬಹುತೇಕ ವಿಷಯಗಳ ಕುರಿತಗೊಂದಲ ಮತ್ತು ಸಮಸ್ಯೆಗಳಿಗೆ ಪರಿಹಾರಗಳಿಲ್ಲವಾದರೂ ಸಮಾಧಾನಕರ ಉತ್ತರಗಳು ದೊರಕಿದವು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಮಂಗಳೂರು ವ್ಯಾಪ್ತಿಯ ನೋಡಲ್ ಅಧಿಕಾರಿಗಳಾದ ರವೀಂದ್ರ ಆಚಾರ್ ಮಾತನಾಡಿ, ಈ ಹಿಂದೆ ವಿದ್ಯಾರ್ಥಿಯು ಕೇವಲ ಓದುವುದು ಪರೀಕ್ಷೆ ಬರೆಯುವುದು ಮತ್ತು ಅಂಕ ಗಳಿಸುವುದು ಬಿಟ್ಟರೆ ಜ್ನಾನಾಧಾರಿತ ಶಿಕ್ಷಣಕ್ಕೆ ತೆರೆದುಕೊಳ್ಳುವ ಅವಕಾಶಗಳು ಕಡಿಮೆ ಇದ್ದವು. ಶಿಕ್ಷಣ ಕೇವಲ ಓದುವುದಕ್ಕೆ ಮತ್ತು ಅಂಕಕ್ಕೆ ಸೀಮಿತವಾಗಬಾರದು ಎಂಬುದನ್ನು ಮನಗಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಅನುಷ್ಠನಗೊಳಿಸಲಾಗಿದೆ. ಈಗಿನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯದ ಕುರಿತಂತೆ ಕೌಶಲ್ಯ ಮತ್ತು ಜ್ನಾನವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಆದರೆ ಅನಿಷ್ಠನಕ್ಕೆ ತರುವಲ್ಲಿ ನೈನತೆಗಳು ಮತ್ತು ಗೊಂದಲಗಳಿವೆ. ಅದಕ್ಕಾಗಿ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯು ೨೦೨೦-೨೦೪೦ ಎಂಬ ಸಮಯದ ಚೌಕಟ್ಟನ್ನು ತಂದಿದ್ದಾರೆ. ನಾವುಗಳು ಇನ್ನೂ ಈ ಹೊಸತನಕ್ಕೆ ನಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಕಷ್ಟ ಆದರೂ ತೋಡಗಿಸಿಕೊಂಡ ಮೇಲೆ ಖಂಡಿತ ಒಳ್ಳೆಯ ಅಭಿಪ್ರಾಯಗಳು ಅನುಭವಗಳು ಸಾಧ್ಯ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಕ್ಷರಾದ ಮಂಜುನಾಥ ಪಟ್ಟಾಭಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯುಕುರಿತ ರೂಪುರೇಷೆಗಳನ್ನು ಪರಿಚಯಿಸದರು. ನಂತರದಲ್ಲಿ ನಡೆದ ಸಂವಾದದಲ್ಲಿ ಉಪನ್ಯಾಸಕರು ಮತ್ತು ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಿಂದ ಸಾಕಷ್ಟು ಬಿರುಸಿನ ಚರ್ಚೆ ನಡೆಸಿದರು. ಹಲವಾರು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಆದರೆ ಅಧಿಕಾರಿಗಳಿಂದ ಸಮಾಧಾನಕರ ಉತ್ತರಗಳಿಗಷ್ಟೇ ದೊರಕಿದವು ಆದರೆ ಪರಿಹಾರ ಸಿಗಲಿಲ್ಲ ಎಂಬುದು ಹೆಚ್ಚಿನ ಕಾಲೇಜುಗಳ ಉಪನ್ಯಾಸಕರ ಅಭಿಪ್ರಾಯವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಪಾಠೇತರ ಚಟುವಟಿಕೆಗಳಲ್ಲಿ ಇರುವ ಯೋಗ ಮತ್ತು ಸ್ಪೋರ್ಟ್ಸ ಕುರಿತು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಯೋಗ ನಮ್ಮದೇಶದ ಶ್ರೇಷ್ಠ ವಿದ್ಯೆ. ಅದಕ್ಕೆ ಪರಿಣಿತg ಅಗತ್ಯತೆ ಬೇಕಾಗುತ್ತದೆ. ಕಾಲೇಜುಗಳಲ್ಲಿ ಯೋಗ ಪರಿಣಿತರಿಂದ ಯೋಗ ಕಲಿಸಲು ತಾವು ಯಾವ ರೀತಿಯ ಅನುಕೂಲ ಮಾಡಿಕೊಡುವಿರಿ? ಅದರ ಆರು ಸೆಮಿಸ್ಟರ್ ಗಳಲ್ಲಿ ಸ್ಪೋರ್ಟ್ಸನ್ನು ಓದಲೇಬೇಕು. ಹಾಗಿರುವಾಗ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಏಕಕಾಲದಲ್ಲಿ ಚಟುವಟಿಕೆಗಳನ್ನು ಮಾಡುವುದು ಹೇಗೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿಯವರು ಕೇಳಿದ ಪ್ರಶ್ನೆಗೆ ನೋಡಲ್ ಅಧಿಕಾರಿಗಳಾದ ರವೀಂದ್ರ ಆಚಾರ್ ಅವರು ಉತ್ತರಿಸಿ ಇದನ್ನು ಸರಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

Click here

Click here

Click here

Click Here

Call us

Call us

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಒಪನ್ ಎಲೆಕ್ಟವ್ ಎನ್ನುವ ವಿಷಯಕ್ಕೆ ಬಂದರೆ ವಿದ್ಯಾರ್ಥಿಯು ತಾನೂ ಅಭ್ಯಸಿಸುವ ವಿಷಯವನ್ನು ಬಿಟ್ಟು ಬೇರೆಯದಾದ ವಿಷಯವನ್ನು ಅಭ್ಯಸಿಸಬೇಕು. ಆದರೆ ಇಲ್ಲಿ ಕೆಲವು ಕಾಲೇಜುಗಳಲ್ಲಿ ಕೆಲವು ಕೋರ್ಸಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇನ್ನೊಂದೆಡೆ ಕೇವಲ ವಾಣಿಜ್ಯ ವಿಷಯದ ಕಾಲೇಜುಗಳಿವೆ ಕೆಲವು ಕಡೆ ಕೆಲವು ಕೋರ್ಸಗಳಿದ್ದರೂ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುಲಾಗಿದೆ ಮತ್ತು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗಿರುವಾಗ ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗೆ ಅಧಿಕಾರಿಗಳಿಂದ ಸಮರ್ಪಕಉತ್ತರ ಸಿಗಲಿಲ್ಲ ಎಂಬುದು ಹಲವು ಕಾಲೇಜುಗಳ ಉಪನ್ಯಾಸಕರ ಅಭಿಪ್ರಾಯವಾಗಿದೆ.

ಇವುಗಳನ್ನು ಮುಖ್ಯವಾಗಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಭ್ಯಸಿಸಬೇಕಾದ ಡಿಜಿಟಲ್ ಪ್ಲೂಯನ್ಸಿ ಮತ್ತು ಪರಿಸರ ಅಧ್ಯಯನ ಎಂಬ ವಿಷಯಕ್ಕೆ ಕುರಿತಂತೆ ಇರುವ ಗೊಂದಲವನ್ನು ಸ್ವಲ್ಪಮಟ್ಟಿಗೆ ಸರಿಪಡಿಸಿ ಸೆಮಿಸ್ಟರ್‌ಗಳಿಗೆ ಪೂರಕವಾಗಿ ನೀಡಲಾಗುವುದಕ್ಕೆ ಅನುಮತಿ ದೊರಕಿತು. ಡಿಜಿಟಲ್ ಪ್ಲೂಯನ್ಸಿ ಎಂಬ ವಿಷಯವನ್ನು ಯಾರು ಕಲಿಸುವುದು. ಅಲ್ಲದೇ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಇದು ಅಗತ್ಯವೇ ಎಂಬುದರ ಕುರಿತಾಗಿ ಪ್ರಶ್ನೇಗಳನ್ನು ಕೇಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ರೇಖಾ ಬನ್ನಾಡಿ ಸ್ವಾಗತಿಸಿದರು. ಬೌತಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಲಲಿತಾ ದೇವಿ ವಂದಿಸಿದರು. ಸೂಕ್ಷ್ಮಾಣು ಜೀವಶಾಸ್ತ್ರ ಮುಖ್ಯಸ್ಥೆ ಸುಮಾ ಜಿ.ಆರ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply