ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಲ್ಬಾಡಿ-ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ‘ಟೀಂ ಅಲ್ಬಾಡಿ-ಆರ್ಡಿ’ಯ ನೇತೃತ್ವದಲ್ಲಿ ವರ್ಗಾವಣೆಗೊಂಡ ಕನ್ನಡ ಶಿಕ್ಷಕಿ ಮಾಲತಿ ವಕ್ವಾಡಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಶಿಕ್ಷಕಿ ಮಾಲತಿ ಅವರು ಮಲ್ಪೆ ಸರಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡಿದ್ದು ಅಲ್ಬಾಡಿ-ಆರ್ಡಿ’ಯ ಮಕ್ಕಳು ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ, ಹಳೆವಿದ್ಯಾರ್ಥಿ ಸಂಘ ಹಾಗೂ ಊರವರು ಶಿಕ್ಷಕಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.