ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ತುಮಕೂರು ಜಿಲ್ಲಾ ಸಂಸ್ಥೆ ಸಹಯೋಗದೊಂದಿಗೆ ಗಾಂಧಿನಗರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ತುಮಕೂರಿನ ಸಿದ್ಧಾರ್ಥ ಕಾಲೇಜು ಆವರಣದಲ್ಲಿ ರವಿವಾರ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ಮಟ್ಟದ ಆಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪುರುಷರ ತಂಡ ಭರತ್ ಸಾಯಿಕುಮಾರ್ ಸ್ಮರಣಾರ್ಥ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಪಡೆಯಿತು.
ರಾಜ್ಯದ 24 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯು ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆದಿದ್ದು, ಅಂತಿಮ ಹಣಾಹಣಿಯಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್‌ಕ್ಲಬ್ ತಂಡವನ್ನು 35-22 ಹಾಗೂ 35-14 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು. ಸೆಮಿಫೈನಲ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಸಹ್ಯಾದ್ರಿ ಸ್ಪೋರ್ಟ್ಸ್‌ಕ್ಲಬ್ ತಂಡವನ್ನು 35-21 ಹಾಗೂ 35-18 ಅಂಕಗಳಿಂದ ಸೋಲಿಸಿದರೆ, ಬನಶಂಕರಿ ತಂಡದವರು ಅತಿಥೇಯ ಗಾಂಧಿನಗರ ಸ್ಪೋರ್ಟ್ಸ್‌ಕ್ಲಬ್ ತಂಡವನ್ನು ಸೋಲಿಸಿ ಫೈನಲ್ ಹಂತಕ್ಕೆ ತೇರ್ಗಡೆಗೊಂಡಿದ್ದರು. ಬನಶಂಕರಿ ಸ್ಪೋರ್ಟ್ಸ್ ಕ್ಲಬ್ ತಂಡ ದ್ವಿತೀಯ, ಸಹ್ಯಾದ್ರಿ ಸ್ಪೋರ್ಟ್ಸ್ ಕ್ಲಬ್ ತಂಡ ಹಾಗೂ ಅತಿಥೇಯ ಗಾಂಧಿನಗರ ತಂಡ ತೃತೀಯ ಸ್ಥಾನಗಳನ್ನು ಪಡೆಯಿತು.
ಆಳ್ವಾಸ್‌ನ ಚೇತನ್ ಅತ್ಯುತ್ತಮ ಫ್ರಂಟ್ ಪ್ಲೇಯರ್, ಬನಶಂಕರಿ ತಂಡದ ತರುಣ್ ಅತ್ಯುತ್ತಮ ಬ್ಯಾಕ್ ಪ್ಲೇಯರ್ ಹಾಗೂ ಅತಿಥೇಯ ಗಾಂಧಿನಗರ ಸ್ಪೋರ್ಟ್ಸ್‌ಕ್ಲಬ್‌ನ ಪ್ರದೀಪ್ ಅತ್ಯುತ್ತಮ ಸೆಂಟರ್ ಪ್ಲೇಯರ್ ವೈಯಕ್ತಿಕ ಪ್ರಶಸ್ತಿ ಗಳಿಸಿದರು.