ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ಚಲನಚಿತ್ರ ನಟ ರಮೇಶ್ ಭಟ್ ಶುಕ್ರವಾರ ಮಂಕಿ ಮೂಲ ಮನಗೆ ಭೇಟಿ ನೀಡುವ ಸಂದರ್ಭ ಬೀಜಾಡಿ ಕಪಿಲಾ ದೇಶೀಹಸುಗಳ ಗೋಶಾಲೆಗೆ ಭೇಟಿ ನೀಡಿ ಗೀರ್ ಹಾಗೂ ಇತರ ಜಾತಿ ಹಸುಗಳ ವೀಕ್ಷಿಸಿದರು.
ಈ ಸಂದರ್ಭ ಅವರು ಮಾತನಾಡಿ ನೂರಾರು ದೇಸಿತಳಿ ಹಸುಗಳು ಕಣ್ಮರೆಯಾಗಿ ಬೆರಳೆಣಿಕೆಯಷ್ಟು ಹಸುಗಳ ಮಾತ್ರ ಉಳಿದಿದೆ. ದೇಶೀ ಹಸುಗಳ ರಕ್ಷಣೆ ಮಾಡದಿದ್ದರೆ ಭಾರತೀಯ ಗೋತಳಿಗಳ ಇತಿಹಾಸ ಸೇರಲಿದ್ದು, ಕಪಿಲಾ ಗೋಲೆಯಲ್ಲಿ ಗೀರ್ ಅಲ್ಲದೆ ಬೇರೆ ತಳಿಗಳ ರಕ್ಷಣೆ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಕಪಿಲಾ ಗೋಶಾಲೆ ಸಂಸ್ಥಾಪಕ ಕುಮಾರ್ ಕಾಂಚನ್ ಅವರು ರಮೇಶ್ ಭಟ್ ಅವರನ್ನು ಬರಮಾಡಿಕೊಂಡು, ಗೋ ತಳಿಗಳ ಬಗ್ಗೆ ಮಾಹಿತಿ ನೀಡಿ, ದೇಶೀಹಸುಗಳಿಂದ ಸಿದ್ದ ಮಾಡುತ್ತಿರುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ದೇಶೀಹಸುಗಳ ವೀಕ್ಷಿಸಿದ ನಂತರ ರಮೇಶ್ ಭಟ್ ರೋಟರಿ ಕ್ಲಬ್ ಕುಂದಾಪುರಕ್ಕೆ ಭೇಟಿ ನೀಡಿದ್ದು, ಮಾಜಿ ರೋಟರಿ ಸಹಗೌವರ್ನರ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಹಾಗೂ ಸದಸ್ಯರು ಸನ್ಮಾನಿಸಿದರು. ರೋಟೇರಿಯನ್ ಮುತ್ತಯ್ಯ ಶೆಟ್ಟಿ, ನಾಗರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕುಮಾರ್ ಕಾಂಚನ್ ರೋಟರಿ ಸದಸ್ಯರು ಇದ್ದರು.