ಆಳ್ವಾಸ್‌ನಲ್ಲಿ ವಾರ್‌ಟೆಕ್ಸ್ ಟೆಕ್ ಫೆಸ್ಟ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ವೃತ್ತಿ ಬದುಕು ಸಫಲವಾಗಲು ತಾಂತ್ರಿಕ ಜ್ಞಾನ ಅಗತ್ಯ ಎಂದು ಬೆಂಗಳೂರಿನ ಕ್ಯೂ-ಸ್ಪೈಡರ್ಸ್ ಸಂಸ್ಥೆಯ ಕಾರ್ಪೋರೇಟ್ ಟ್ರೈನರ್ ವಿಶಾಲ್ ವನಕಿ ಹೇಳಿದರು.

Call us

Click Here

ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸಯನ್ಸ್ ಇಂಜಿನಿಯರಿಂಗ್ ವಿಭಾಗದ ಸಿ-ಮೇನಿಯಕ್ಸ್ ಫೋರಂನ ವತಿಯಿಂದ ನಡೆದ ಗುರುವಾರ ‘ವಾರ್‌ಟೆಕ್ಸ್’ ಟೆಕ್ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ವಿದ್ಯಾರ್ಥಿಯಲ್ಲೂ ಬುದ್ಧಿವಂತಿಕೆಯಿದೆ. ಅದನ್ನು ವ್ಯಕ್ತಪಡಿಸಲು ಈಗಿನ ಮಕ್ಕಳಲ್ಲಿ ಆತ್ಮಸ್ಥೈರ್ಯದ ಕೊರತೆಯಿದೆ. ವಿದ್ಯಾರ್ಥಿಗಳು ತಾಂತ್ರಿಕ ಕ್ಷೇತ್ರದಲ್ಲಿ ಸದೃಢವಾಗಿ ಬೆಳೆಯಬೇಕಾದರೆ ಪ್ರೋಗ್ರಾಮಿಂಗ್ ಹಾಗೂ ಕೋಡಿಂಗ್ ಕೌಶಲ್ಯಗಳನ್ನು ಬಲಪಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಉದ್ಘಾಟನೆಯ ಬಳಿಕ ಸಂಸ್ಥೆಯ ಅಂತರ್ ಕಾಲೇಜು ಮಟ್ಟದ ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್ ಸಂಬಂಧಿಸಿದ ೧೩ ಸ್ಪರ್ದೆಗಳು ನಡೆದವು. ಆಳ್ವಾಸ್ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದರು.

ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶೈಕ್ಷಣಿಕ ಪರಿಸರವು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಅನುಕೂಲವಾಗುವಂತಿರಬೇಕು. ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ಸೋಲಿನಿಂದಲೇ ಗೆಲುವಿನ ಪಾಠ ಕಲಿಯಬೇಕೆಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಕಂಪ್ಯೂಟರ್ ಸಯನ್ಸ್ ವಿಭಾಗ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ, ಕಾರ್ಯಕ್ರಮ ಸಂಯೋಜಕರಾದ ರೀನಾ ಲೋಬೊ, ವಾಸುದೇವ್ ಶಹಾಪುರ್, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಸಂಯೋಜಕರಾದ ಯುವರಾಜ್, ತುಷಿತ್ ಶುಕ್ಲಾ, ಲಕ್ಷ್ಮಣ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮೃದ್ದಿ ಸ್ವಾಗತಿಸಿದರು, ಕೌಶಿಕ್ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply